ಕೇಸರಿ ಕೋಟೆಯಲ್ಲಿ ದಾಯಾದಿ ಕಲಹ,ಶಿಸ್ತಿನ ಪಕ್ಷದಲ್ಲಿ ಇದೆಂಥಾ ಅಂತರ್ಯುದ್ಧ..?

ಮಾಜಿ ಸಿಎಂ ಯಡಿಯೂರಪ್ಪ ಮತ್ತು  ವಿಜಯೇಂದ್ರ ವಿರುದ್ಧ ಬಿಎಸ್‌ವೈ ವಿರೋಧಿ ಗುಂಪು ತಿರುಗಿ ಬಿದ್ದಿದೆ. ಟಕ್ಕರ್ ಕೊಡ್ತಾ ಇದೆ.
 

First Published Mar 17, 2023, 3:13 PM IST | Last Updated Mar 17, 2023, 3:13 PM IST

ರಾಜ್ಯ ಬಿಜೆಪಿಯಲ್ಲಿ ಬಿಎಸ್‌ವೈ ಗುಂಪು ಮತ್ತು ಬಿಎಸ್‌ವೈ ವಿರೋಧಿ ಗುಂಪಿನ ಮಧ್ಯೆ ತಿಕ್ಕಾಟ ಶುರುವಾಗಿದ್ದು, ಯಡಿಯೂರಪ್ಪ , ವಿಜಯೇಂದ್ರ ವಿರುದ್ಧ ವಿರೋಧಿ ಗುಂಪು ತಿರುಗಿ ಬಿದ್ದಿರೋ ಹೊತ್ತಲ್ಲೇ, ಕೇಸರಿ ಕೋಟೆಯೊಳಗೆ ಮತ್ತೊಂದು ಬೆಂಕಿ ಧಗಧಗಿಸ್ತಾ ಇದೆ. ಸಿಟಿ ರವಿ, ಸೋಮಣ್ಣ  ವಿಜಯೇಂದ್ರ ಮಧ್ಯೆ ಮಾತಿನ ಸಮರ ಉಂಟಾಗಿದೆ.  ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ ದಿನ ಬೆಳಗಾದರೆ ವಿಜಯೇಂದ್ರ ಸುದ್ದಿ ಅಧಿಕಾರ ದುರ್ಭಳಕ್ಕೆ ಮಾಡಿಕೊಳ್ಳುತ್ತಿದ್ದಾರೆಂದು. ಇನ್ನು ತಮ್ಮ ವಿರುದ್ಧ, ಪುತ್ರ ವಿಜಯೇಂದ್ರ ವಿರುದ್ಧ ಕತ್ತಿ ಮಸೆಯುತ್ತಿರುವವರ ಬಗ್ಗೆ ಬಿಎಸ್‌ವೈ ಏನ್ ಹೇಳ್ತಾರೆ..? ಕೇಸರಿ ಕೋಟೆಯ ಆ ದಾಯಾದಿ ಕಲಹದ ಬಗ್ಗೆ, ಬಿಜೆಪಿ ನಾಯಕರು ಹೇಳಿದ್ದೇನು..? ಈ ವಿಡಿಯೋ ನೋಡಿ