Asianet Suvarna News Asianet Suvarna News

ಅಚ್ಚರಿ ಮೂಡಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಈ ದಿಢೀರ್ ನಿರ್ಧಾರ..!

Feb 1, 2021, 5:44 PM IST

ಬೆಂಗಳೂರು, (ಫೆ.01): ಸಿಎಂ ಹಾಗೂ ಸಚಿವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಮೊದಲೇ ಕಾರು ಗೇಟ್‌ನಲ್ಲಿ ರೆಡಿಯಾಗಿರಬೇಕು. ಸಿಎಂ ಹೊರಡುವ ಮೊದಲೇ ಕಾರು ರೆಡಿಯಾಗಿರಲು ಅವರ ಆಪ್ತ ಸಹಾಯಕರು ಸೂಚನೆ ಕೊಡುತ್ತಾರೆ.

ಆದ್ರೆ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು (ಸೋಮವಾರ) ಯಾವುದೇ ಮಾಹಿತಿ ನೀಡದೇ ವಿಧಾನಸೌಧದಿಂದ ಹೊರ ಬಂದ ಅಚ್ಚರಿ ಮೂಡಿಸಿದ್ದಾರೆ. ಇದರಿಂದ ವಾಹನ ಚಾಲಕರು, ಬೆಂಗಾವಲು ಪಡೆ ಗಲಿಬಿಲಿಗೊಂಡಿದ್ದಾರೆ. ಅಲ್ಲದೇ ಯಡಿಯೂರಪ್ಪ ಎರಡು ನಿಮಿಷಗಳ ಕಾಲ ಕಾದು ನಿಂತು ವಾಹನ ಬಂದ ಬಳಿಕ ಹೊರಟ ಹೋದರು. ಸಿಎಂ ನಡೆಯಿಂದ ಸಿಬ್ಬಂದಿಗಳು ಗಾಬರಿಯಾಗಿದ್ದಾರೆ.

ಅದರಲ್ಲೂ ವಿಧಾನಸೌಧದಿಂದ ತಮ್ಮ ಸರ್ಕಾರಿ ನಿವಾಸ ಕಾವೇರಿಗೆ ತೆರಳದೇ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ತೆರಳಿರುವುದು ಭಾರೀ ಕುತೂಹಲ ಮೂಡಿಸಿದೆ.

Video Top Stories