ಬಹಿರಂಗ ವೇದಿಕೆಯಲ್ಲೇ ಪಂಚಮಸಾಲಿ ಸ್ವಾಮೀಜಿ-BSY ನಡುವೆ ಮಾತಿನ ಚಕಮಕಿ

ಪಂಚಮಸಾಲಿ ಗುರುಪೀಠ ವಚನಾನಂದ ಸ್ವಾಮೀಜಿ ಮಾತಿಗೆ ಬೇಸತ್ತು ಮುಖ್ಯಮಂತ್ರಿ ಯಡಿಯೂರಪ್ಪ ವೇದಿಕೆಯಿಂದ ನಿರ್ಗಮಿಸಲು‌ ಮುಂದಾಗಿರುವ ಪ್ರಸಂಗ ನಡೆದಿದೆ.

Share this Video
  • FB
  • Linkdin
  • Whatsapp

ದಾವಣಗೆರೆ, [ಜ.14]: ಪಂಚಮಸಾಲಿ ಗುರುಪೀಠ ವಚನಾನಂದ ಸ್ವಾಮೀಜಿ ಮಾತಿಗೆ ಬೇಸತ್ತು ಮುಖ್ಯಮಂತ್ರಿ ಯಡಿಯೂರಪ್ಪ ವೇದಿಕೆಯಿಂದ ನಿರ್ಗಮಿಸಲು‌ ಮುಂದಾಗಿರುವ ಪ್ರಸಂಗ ನಡೆದಿದೆ.

‘ನಮ್ಮಿಂದಲೇ ನೀವು ಸಿಎಂ ಆಗಿರೋದು : ಸಚಿವ ಸ್ಥಾನ ನೀಡಲೇಬೇಕು ಎಂದ್ರು’

ಇಂದು [ಮಂಗಳವಾರ] ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಗುರುಪೀಠದಲ್ಲಿ ನಡೆದ ಹರಜಾತ್ರೆ ವೇದಿಕೆಯಲ್ಲಿ ಘಟನೆ ನಡೆದಿದೆ. ಬಹಿರಂಗವಾಗಿಯೇ ಹೇಳಿದ ಸ್ವಾಮೀಜಿ ಮಾತಿಗೆ ಬೇಸರಗೊಂಡ ಬಿಎಸ್ ವೈ ನಂತರ ಸ್ವಲ್ಪ ಹೊತ್ತು ಭಾವುಕರಾಗಿರುವುದು ಕಂಡುಬಂತು. ಬಳಿಕ ನನಗೆ ಅಧಿಕಾರದ ಆಸೆ ಇಲ್ಲ, ಬೇಕಿದ್ರೆ ರಾಜೀನಾಮೆ ಕೊಟ್ಟು ಬರ್ತಿನಿ ಎಂದು ಭಾವನಾತ್ಮಕವಾಗಿ ಭಾಷಣ ಮಾಡಿದರು. ಅಷ್ಟಕ್ಕೂ ಸ್ವಾಮೀಜೆ ಮಾತನಾಡಿರುವುದೇನು..? ವಿಡಿಯೋನಲ್ಲಿ ನೋಡಿ.

Related Video