Asianet Suvarna News Asianet Suvarna News

ರಾಜ್ಯಕ್ಕೆ ಈ ಬಾರಿ ಬ್ರಾಹ್ಮಣರೇ ಮುಖ್ಯಮಂತ್ರಿ, 8 ಮಂದಿ ಉಪಮುಖ್ಯಮಂತ್ರಿ! ಎಚ್‌ಡಿಕೆ ಬಾಂಬ್

ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್‌ ಜೋಶಿ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಹೆಸರೂ ಕೇಳಿಬಂದಿದೆ. ಉಳಿದಂತೆ 8 ಮಂದಿ ಬ್ರಾಹ್ಮಣರು ಉಪಮುಖ್ಯಮಂತ್ರಿ ಆಗಲಿದ್ದಾರೆ.

ಬೆಂಗಳೂರು (ಫೆ.05): ದೆಹಲಿಯಲ್ಲಿ ಇತ್ತೀಚೆಗೆ ಆರ್‌ಎಸ್‌ಎಸ್‌ ಪ್ರಮುಖರ ಸಭೆಯಲ್ಲಿ ರಾಜ್ಯದ ಮುಂದಿನ ಮುಖ್ಯಮಂತ್ರಿಯ ಬಗ್ಗೆ ಚರ್ಚೆ ನಡೆಸಲಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್‌ ಜೋಶಿ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಹೆಸರೂ ಕೇಳಿಬಂದಿದೆ. ಉಳಿದಂತೆ 8 ಮಂದಿ ಬ್ರಾಹ್ಮಣರು ಉಪಮುಖ್ಯಮಂತ್ರಿ ಆಗಲಿದ್ದಾರೆ  ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. 

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಹ್ಲಾದ್ ಜೋಷಿ ಮುಖ್ಯಮಂತ್ರಿ ಆಗುತ್ತಾರೆಂಬ ಪ್ರಸ್ತಾಪ ಆಗಿದ್ಯಂತೆ. ಪ್ರಹ್ಲಾದ್ ಜೋಷಿ ಸಿಎಂ ಆದರೆ,  8 ಜನ ಉಪಮುಖ್ಯಮಂತ್ರಿ ಆಗುತ್ತಾರೆ. ಆದರೆ ಇವರು ಮರಾಠ ಬ್ರಾಹ್ಮಣರು. ಉಪಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದನ್ನು ಆದಷ್ಟು ಬೇಗ ತೆಗೆದಿಡ್ತೀನಿ. ಹೀಗಾಗಿ ಜೆಡಿಎಸ್ ವಿರುದ್ದ ಪಂಚರತ್ನ ರಥಯಾತ್ರೆ ಬಗ್ಗೆ ಪ್ರಹ್ಲಾದ್‌ ಜೋಷಿ ಟೀಕೆ ಮಾಡುತ್ತಿದ್ದಾರೆ.

Video Top Stories