Asianet Suvarna News Asianet Suvarna News

ಗಾಂಧಿಯನ್ನು ಕೊಂದ ಬ್ರಾಹ್ಮಣರು, ಆರ್‌ಎಸ್‌ಎಸ್‌ನವರು ದೇಶವನ್ನು ಹಾಳು ಮಾಡ್ತಾರೆ: ಕುಮಾರಸ್ವಾಮಿ

ನಮ್ಮ ಮೂಲ ಬ್ರಾಹ್ಮಣರಂತೆ ಸರ್ವೇಜನೋ ಸುಖೀನೋ ಭವಂತು ಎನ್ನುವುದಿಲ್ಲ. ಗಾಂಧೀಜಿಯನ್ನು ಕೊಂದ ಬ್ರಾಹ್ಮಣ ವರ್ಗದವರಾದ ಇವರು ದೇಶವನ್ನ ಹಾಳು ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. 

ಬೆಂಗಳೂರು (ಫೆ.05): ಬಿಜೆಪಿಯ ಹುನ್ನಾರ RSS ಕುತಂತ್ರಕ್ಕೆ ಬಲಿಯಾಗಬೇಡಿ. ನಮ್ಮ ಮೂಲ ಬ್ರಾಹ್ಮಣರಂತೆ ಸರ್ವೇಜನೋ ಸುಖೀನೋ ಭವಂತು ಎನ್ನುವುದಿಲ್ಲ. ಗಾಂಧೀಜಿಯನ್ನು ಕೊಂದ ಬ್ರಾಹ್ಮಣ ವರ್ಗದವರಾದ ಇವರು ದೇಶವನ್ನ ಹಾಳು ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. 
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಬ್ರಾಹ್ಮಣರಲ್ಲಿ ಎರಡು ಮೂರು ವಿಧಗಳಿವೆ. ಶೃಂಗೇರಿಯ ಮಠ ಒಡೆದ ವರ್ಗ ಇವರದ್ದು. ಮಹಾತ್ಮ ಗಾಂಧಿ ಕೊಂದ ಬ್ರಾಹ್ಮಣರು ಇವರು. ನಮ್ಮ ಹಳೆಯ ಬ್ರಾಹ್ಮಣರಲ್ಲ. ಹಳೇ ಬ್ರಾಹ್ಮಣರು ಸರ್ವೇಜನ ಸುಖಿನೋ ಭವಂತು ಅನ್ನೋರು. ಆದ್ರೆ ಇವರು ದೇಶ ಹೊಡೆಯುವ, ದೇಶಕ್ಕೆ ಕೊಡುಗೆ ನೀಡಿದವರನ್ನ ಹತ್ಯೆ ಮಾಡಿದವರು. ಪ್ರಹ್ಲಾದ್ ಜೋಶಿಯನ್ನ ಚುನಾವಣೆ ನಂತರ ಸಿಎಂ ಮಾಡಬೇಕು ಅಂತ ಸಂಘ ಪರಿವಾರ ನಿರ್ಧರಿಸಿದೆ. ಅವರು ನಮ್ಮ ಹಳೆಯ ಕಾಲದ ಬ್ರಾಹ್ಮಣ ಅಲ್ಲ ಎಂದರು.