Asianet Suvarna News Asianet Suvarna News

ವಿಜಯೇಂದ್ರನನ್ನು ಸಿಎಂ ಮಾಡಲು ಬೊಮ್ಮಾಯಿ ಆಯ್ಕೆ: ಮಾಜಿ ಸಚಿವ ಅಚ್ಚರಿ ಹೇಳಿಕೆ

ಬಸವರಾಜ ಬೊಮ್ಮಾಯಿರವರನ್ನು ಮುಖ್ಯಮಂತ್ರಿ ಮಾಡಿರುವುದು ಭವಿಷ್ಯದಲ್ಲಿ ವಿಜಯೇಂದ್ರರನ್ನ ಸಿಎಂ ಮಾಡುವುದಕ್ಕಾಗಿ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.

ಕಾರವಾರ, (ಜು.28): ಬಸವರಾಜ ಬೊಮ್ಮಾಯಿರವರನ್ನು ಮುಖ್ಯಮಂತ್ರಿ ಮಾಡಿರುವುದು ಭವಿಷ್ಯದಲ್ಲಿ ವಿಜಯೇಂದ್ರರನ್ನ ಸಿಎಂ ಮಾಡುವುದಕ್ಕಾಗಿ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.

ಬೊಮ್ಮಾಯಿ ಸಚಿವ ಸಂಪುಟದ ಬಗ್ಗೆ ಮಹತ್ವದ ಸುಳಿವು ಕೊಟ್ಟ ವಿಜಯೇಂದ್ರ

ಕಾರವಾರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು. ಬೊಮ್ಮಾಯಿ ಆಯ್ಕೆಯ ಮೂಲಕ ಬಿ.ಎಸ್ ಯಡಿಯೂರಪ್ಪನವರು ಪಕ್ಷದಲ್ಲಿ ಹಿಡಿತ ಸಾಧಿಸಿದ್ದಾರೆ. ಸೂಪರ್ ಸಿಎಂ ಆಗಿ ಯಡಿಯೂರಪ್ಪ ಇನ್ನು ಮುಂದೆ ರಾಜ್ಯದಲ್ಲಿ ಅಧಿಕಾರ ಚಲಾಯಿಸುತ್ತಾರೆ. 2023ಕ್ಕೆ ವಿಜಯೇಂದ್ರ ಸಿಎಂ ಮಾಡಲು ಬೊಮ್ಮಾಯಿಯನ್ನ ಈಗ ಸಿಎಂ ಮಾಡಿದ್ದಾರೆ ಎಂದು ಹೇಳಿದ್ದಾರೆ.

Video Top Stories