ಸಿದ್ದರಾಮಯ್ಯ ಮುಂದೆ ಘರ್ಜಿಸೋ ಕೇಸರಿ ಕಲಿಯಾರು? ಯತ್ನಾಳರೋ.. ಬೊಮ್ಮಾಯಿಯೋ?
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮುಂದೆ ವಿರೋಧ ಪಕ್ಷವಾಗಿರುವ ಬಿಜೆಪಿಯಲ್ಲಿ ಯಾರು ವಿರೋಧ ಪಕ್ಷದ ನಾಯಕರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಬೆಂಗಳೂರು (ಮೇ 25): ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮುಂದೆ ವಿರೋಧ ಪಕ್ಷವಾಗಿರುವ ಬಿಜೆಪಿಯಲ್ಲಿ ಯಾರು ವಿರೋಧ ಪಕ್ಷದ ನಾಯಕರಾಗಲಿದ್ದಾರೆ ಎಂಬುದು ಇನ್ನೂ ಅಂತಿಮವಾಗಿ ತೀರ್ಮಾನಾಗಿಲ್ಲ. ಕೇಸರಿ ಪಡೆಯಲ್ಲಿ ಯಾರು ಸಿದ್ದರಾಮಯ್ಯ ವಿರುದ್ಧ ಘರ್ಜನೆ ಮಾಡಲು ಸಿದ್ಧರಾಗಲಿದ್ದಾರೆ ಎನ್ನುವುದು ನೋಡಬೇಕಿದೆ.
ಈಗಾಗಲೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಎಲ್ಲರಿಗೂ ತಿವಿಯುತ್ತಿದ್ದ ಬಸವರಾಜ ಬೊಮ್ಮಾಯಿ ಅವರನ್ನೇ ವಿರೋಧ ಪಕ್ಷದ ನಾಯಕರಾಗಿ ಕೂರಿಸುವ ಸಾಧ್ಯತೆಯಿದೆ. ಜೊತೆಗೆ, ಬೊಮ್ಮಾಯಿ ಅವರ ಮಾತಿಗಿಂತ ಹಿಂದುತ್ವದ ಬಗ್ಗೆ ಮಾತನಾಡುವ, ಹಿಂದೂ ಹುಲಿ ಎಂದು ಹೆಸರಿರುವ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಜಿದೆ. ಆದರೆ, ಯತ್ನಾಳ್ ಅವರಿಗೆ ವಿಪಕ್ಷ ನಾಯಕನ ಸ್ಥಾನ ನೀಡಲು ಸಂಪೂರ್ಣ ಅರ್ಹರಿದ್ದರೂ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ವೇಳೆ ಆಡಳಿತ ಸರ್ಕಾರದ ವಿರೋಧವಾಗಿ ನಡೆದುಕೊಂಡಿದ್ದರಿಂದ ಹೈಕಮಾಂಡ್‌ಗೆ ಅವರ ಮೇಲಿನ ವಿಶ್ವಾಸ ಕಡಿಮೆ ಎಂದು ಕೇಳಿಬರುತ್ತಿದೆ.