ಬಿಜೆಪಿಯಲ್ಲಿ ನನಗೆ ಟಿಕೆಟ್ ಕೈತಪ್ಪಲು ಬಿ.ಎಲ್. ಸಂತೋಷ್ ನೇರ ಕಾರಣ, ಶೆಟ್ಟರ್ ಗಂಭೀರ ಆರೋಪ!

ಬಿಜೆಪಿಯಲ್ಲಿ ನನಗೆ ಟಿಕೆಟ್ ಕೈತಪ್ಪಲು ಬಿ.ಎಲ್. ಸಂತೋಷ ಅವರೇ ನೇರ ಕಾರಣ ಎಂದು ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ ಗಂಭೀರ ಆರೋಪ‌ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಏ.18):  ಬಿಜೆಪಿಯಲ್ಲಿ ನನಗೆ ಟಿಕೆಟ್ ಕೈತಪ್ಪಲು ಬಿ.ಎಲ್. ಸಂತೋಷ ಅವರೇ ನೇರ ಕಾರಣ ಎಂದು ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ ಗಂಭೀರ ಆರೋಪ‌ ಮಾಡಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂತೋಷ ಅವರು ತಮ್ಮ ಮಾನಸ ಪುತ್ರ ಮಹೇಶ ತೆಂಗಿನಕಾಯಿಗೆ ಟಿಕೆಟ್ ನೀಡುವ ಸಲುವಾಗಿ ಪಕ್ಷವನ್ನು ಕಟ್ಟಿ ಬೆಳೆಸಿದರನ್ನ ಹೊರ ಹೋಗುವ ಪರಿಸ್ಥಿತಿಯನ್ನು ಪಕ್ಷದಲ್ಲಿ ಸೃಷ್ಟಿಸಲಾಗುತ್ತಿದೆ. ಈ ಹಿಂದೆ ಸಂತೋಷ ಅವರು ಪ್ರಚಾರ ಮಾಡಿದ, ಉಸ್ತುವಾರಿ ವಹಿಸಿಕೊಂಡ ರಾಜ್ಯಗಳು ಸೋತಿವೆ. ಆದರೂ ವರಿಷ್ಠರು ಈ ವಿಧಾನಸಭಾ ಚುನಾವಣೆಯಲ್ಲಿ ‌ರಾಜ್ಯದ ಉಸ್ತುವಾರಿ‌ ಏಕೆ ನೀಡಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಟಿಕೆಟ್ ವಿಷಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ‌ ಬೊಮ್ಮಾಯಿ ಗಟ್ಟಿ‌ಯಾದ ನಿಲುವು ತಾಳಲಿಲ್ಲ. ಬಾಯಿ ಮಾತಲ್ಲ ವರಷ್ಠರೊಂದಿಗೆ ಮಾತನಾಡಿದ್ದೇನೆ ಅಂತ ಹೇಳಿದರು. ಧರ್ಮೆಂದ್ರ ಪ್ರಧಾನ್ ಅವರು ಕರೆ ಮಾಡಿ ಕ್ಷೇತ್ರದಲ್ಲಿ ಬೇರೆಯವರಿಗೆ ಟಿಕೆಟ್ ನೀಡಲಾಗುತ್ತಿದೆ. ಕೂಡಲೆ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ ಕಳಿಸಿ ಅಂತಾ ಹೇಳುತ್ತಾರೆ. ಸೌಜನ್ಯಕ್ಕಾದರೂ ನನಗೆ ಯಾವ ಕಾರಣಕ್ಕೆ ಟಿಕೆಟ್ ನೀಡಲಾಗುತ್ತಿಲ್ಲ ಅನ್ನುವುದನ್ನ ಹೇಳಲಿಲ್ಲ. ಸಂತೋಷ ಅವರು ಅವರ ಮಾನಸಪುತ್ರನಿಗೆ ನೀಡಿದ ಪ್ರೀತಿಯಲ್ಲಿ ನನಗೆ 1% ನೀಡಿದ್ದರೆ ಈ ಬೆಳವಣಿಗಳು ಆಗುತ್ತಿರಲಿಲ್ಲ. ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ನಿಷ್ಟನಾಗಿ ಅವರು ನೀಡುವ ಜವಾಬ್ದಾರಿ ವಹಿಸಿಕೊಂಡು ಪಕ್ಷದ ಏಳ್ಗೆಗೆ ಶ್ರಮಿಸುವುದಾಗಿ ಶೆಟ್ಟರ್ ಹೇಳಿದ್ದಾರೆ.

Related Video