Asianet Suvarna News Asianet Suvarna News

ವಿಪಕ್ಷ ನಾಯಕ ಯಾರಾಗ್ತಾರೆ?: ಸೋಲಿನ ಬಳಿಕ ನಾಳೆ ಬಿಜೆಪಿ ಮೊದಲ ಶಾಸಕಾಂಗ ಪಕ್ಷದ ಸಭೆ!

ವಿಧಾನಸಭೆ ಸೋಲಿನ ಬಳಿಕ ನಾಳೆ ಬಿಜೆಪಿಯ ಮೊದಲ ಶಾಸಕಾಂಗ ಪಕ್ಷದ ಸಭೆ ಹಮ್ಮಿಕೊಳ್ಳಲಾಗಿದೆ. ಬೇರೆ ಬೇರೆ ವಿಭಾಗಗಳ ಸಭೆಯೂ ನಡೆಯಲಿದೆ. ಸೋಲಿನ ಪರಾಮರ್ಶೆ, ಕಾಂಗ್ರೆಸ್‌ ವಿರುದ್ಧ ರಣತಂತ್ರ ಹಾಗೂ ವಿಪಕ್ಷ ನಾಯಕನ ಆಯ್ಕೆ ಬಗ್ಗೆಯೂ ಚರ್ಚೆ ನಡೆಯಲಿದೆ.

ಬೆಂಗಳೂರು (ಜೂ.07): ವಿಧಾನಸಭೆ ಸೋಲಿನ ಬಳಿಕ ನಾಳೆ ಬಿಜೆಪಿಯ ಮೊದಲ ಶಾಸಕಾಂಗ ಪಕ್ಷದ ಸಭೆ ಹಮ್ಮಿಕೊಳ್ಳಲಾಗಿದೆ. ಬೇರೆ ಬೇರೆ ವಿಭಾಗಗಳ ಸಭೆಯೂ ನಡೆಯಲಿದೆ. ಸೋಲಿನ ಪರಾಮರ್ಶೆ, ಕಾಂಗ್ರೆಸ್‌ ವಿರುದ್ಧ ರಣತಂತ್ರ ಹಾಗೂ ವಿಪಕ್ಷ ನಾಯಕನ ಆಯ್ಕೆ ಬಗ್ಗೆಯೂ ಚರ್ಚೆ ನಡೆಯಲಿದೆ. ಜೊತೆಗೆ ಕಾಂಗ್ರೆಸ್‌ ವಿರುದ್ಧ ಮುಂದಿನ ಹೋರಾಟದ ಬಗ್ಗೆ ಮೀಟಿಂಗ್‌ನಲ್ಲಿ ಚರ್ಚಿಸಲಾಗುತ್ತದೆ. ಲೋಕಸಭಾ ಚುನಾವಣಾ ತಯಾರಿ ಬಗ್ಗೆಯೂ ಮಾತುಕತೆ ನಡೆಯಲಿದೆ. ಈ ಸಭೆಯಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್, ಬಿ.ಲ್.ಸಂತೋಷ್ ಹಾಗೂ ಎಲ್ಲಾ ನೂತನ ಶಾಸಕರು ಸೇರಿದಂತೆ ವಿಂಗ್‌ಗಳ ಮುಖ್ಯಸ್ಥರು ಭಾಗಿಯಾಗುತ್ತಾರೆ. ಇನ್ನು ಕೇಂದ್ರದ ಪ್ರತಿನಿಧಿಯಾಗಿ ಅರುಣ್ ಸಿಂಗ್ ಪಾಲ್ಗೊಳ್ಳುತ್ತಾರೆ. ಕಂಪ್ಲೀಟ್ ಮಾಹಿತಿಗಾಗಿ ಈ ವಿಡಿಯೋವನ್ನು ವೀಕ್ಷಿಸಿ.