Asianet Suvarna News Asianet Suvarna News

ಹಿಂದೂ ಮುಖಂಡ ಅರುಣ್‌ ಪುತ್ತಿಲ ಬಗ್ಗೆ ನಳಿನ್ ಕುಮಾರ್‌ ಫಸ್ಟ್‌ ರಿಯಾಕ್ಷನ್!

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಹಿಂದೂ ಮುಖಂಡ ಅರುಣ್‌ ಪುತ್ತಿಲ ಬಿಜೆಪಿ ಸೇರ್ಪಡೆ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

First Published Jul 14, 2023, 11:36 PM IST | Last Updated Jul 14, 2023, 11:36 PM IST

ದಕ್ಷಿಣ ಕನ್ನಡ (ಜು.14): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಪೈಪೋಟಿ ನೀಡಿ ಸೋಲನ್ನಪ್ಪಿದ ಹಾಗೂ ಲೋಕಸಭಾ ಚುನಾವಣೆಯ ಆಕಾಂಕ್ಷಿ ಎಂದು ಹೇಳಲಾಗುತ್ತಿರುವ ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರು ಬಿಜೆಪಿಗೆ ಮರಳಿ ಸೇರ್ಪಡೆ ಆಗುತ್ತಾರಾ ಎಂಬ ಪ್ರಶ್ನೆಗೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮೊದಲ ಬಾರಿಗೆ ಪುತ್ತೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ  ನೀಡಿದ್ದಾರೆ.

ಮಾಧ್ಯಮಗಳೊಂದಿಗ ಮಾತನಾಡಿದ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಪುತ್ತೂರು ಅಥವಾ ಎಲ್ಲೂ ಬಿಜೆಪಿಯಲ್ಲಿ ಗೊಂದಲಗಳು ಆಗಿಲ್ಲ. ಪಕ್ಷೇತರ ಅಭ್ಯರ್ಥಿಗಳು ನಿಂತ ಕಾರಣ ಚುನಾವಣೆಯಲ್ಲಿ ವ್ಯತ್ಯಾಸಗಳಾಗಿವೆ. ಯಾರು ಯಾರು ಪಕ್ಷಕ್ಕೆ ಬರಬೇಕೋ ಪಕ್ಷದಲ್ಲಿ ಇರಬೇಕೋ ನಾವು ಅದನ್ನ ಸರಿ ಮಾಡ್ತೇವೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡ್ತೇವೆ. ನಾವು ರಾಷ್ಟ್ರೀಯ ಪಕ್ಷವಾಗಿ ಅಭ್ಯರ್ಥಿಗಳನ್ನು ಹಾಕ್ತೇವೆ. ಜಾಪ್ರಭುತ್ವದಲ್ಲಿ ಯಾರೂ ಸ್ಪರ್ಧೆ ಮಾಡಬಹುದು. ಅರುಣ್ ಪುತ್ತಿಲ ಅವರ ಬಗ್ಗೆ ವೈಯಕ್ತಿಕವಾಗಿ ಚರ್ಚೆ ಮಾಡಲ್ಲ ಎಂದು ಹೇಳಿದರು.

ಈಗಾಗಲೇ ರಾಷ್ಟ್ರೀಯ ನಾಯಕರ ಜೊತೆ ಅರುಣ್‌ ಕುಮಾರ್‌ ಪುತ್ತಿಲ ಅವರ ಬಗ್ಗೆ ಚರ್ಚೆಗಳು ಆಗಿವೆ. ಆ ಚರ್ಚೆಯ ಉತ್ತರಗಳನ್ನು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ. ಎಲ್ಲ ನೋಡಿಕೊಂಡು ರಾಷ್ಟ್ರೀಯ ನಾಯಕರು, ರಾಜ್ಯದಲ್ಲಿ ವಿಪಕ್ಷ ನಾಯಕರನ್ನೂ ಆಯ್ಕೆ ಮಾಡ್ತಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆ ಆಗಿರುವ 66 ಜನರೂ ಕೂಡ ಸರ್ಕಾರದ ವಿರೋಧ ಪಕ್ಷದ ನಾಯಕನಾಗಲು ಸಮರ್ಥರಿದ್ದಾರೆ ಎಂದರು.