ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ, ಕಾಂಗ್ರೆಸ್ ಗಂಭೀರ ಆರೋಪಕ್ಕೆ ಬಿಜೆಪಿ ತಿರುಗೇಟು

ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ, ಕಾಂಗ್ರೆಸ್ ಗಂಭೀರ ಆರೋಪ, ಅಕ್ರಮ ಬಯಲಾಗುತ್ತಿದ್ದಂತೆ ಚಿಲುಮೆ ಸಂಸ್ಥೆಯ ಲೈಸೆನ್ಸ್ ರದ್ದು, ಪ್ರತಾಪ್ ಸಿಂಹ ಹಾಗೂ ರಾಮದಾಸ್ ಫೈಟ್, ದಾಖಲೆ ಬಿಡುಗಡೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಬಿಜೆಪಿ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಈ ಕುರಿತು ತುರ್ತು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಖಾಸಗಿ ಸಂಸ್ಥೆ ಚಿಲುಮೆ ಅಕ್ರಮವಾಗಿ ಮಾಹಿತಿ ಸಂಗ್ರಿಹಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮತದಾರರ ಮಾಹಿತಿ ಸಂಗ್ರಹ ವಿಚಾರದಲ್ಲಿ ಬಿಜೆಪಿಯ ಪಾತ್ರ ಏನೂ ಇಲ್ಲ. ಚಿಲುಮೆ ಖಾಸಗಿ ಸಂಸ್ಥೆ ಈ ಸರ್ವೇ ಮಾಡಿದೆ. ಈ ಪ್ರಕರಣವನ್ನು ಸರ್ಕಾರ ತನಿಖೆ ನಡೆಸಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇತ್ತ ಚಿಲುಮೆ ಸಂಸ್ಥೆಗೆ ಸರ್ವೆ ಮಾಡಲು ಅನುಮತಿ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ನಾಯಕ ರವಿಕುಮಾರ್ ಹೇಳಿದ್ದಾರೆ.ಮತಗಾರರ ಮಾಹಿತಿ ಅಕ್ರಮವಾಗಿ ಸಂಗ್ರಹ ವಿಚಾರ ಕುರಿತು ಮಾಜಿ ಸಿಎಂ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಮಾಡಿದ ಅಕ್ರಮಗಳನ್ನೇ ಬಿಜೆಪಿ ಮಾಡುತ್ತಿದೆ. ಇದು ಮಂತ್ರಿಗಳ ಬೇನಾಮಿ ಹೆಸರಿನ ಸಂಸ್ಥೆ ಈ ಅಕ್ರಮ ಮಾಡಿದೆ ಎಂದಿದ್ದಾರೆ.

Related Video