2024ರಲ್ಲಿ ಗೆಲ್ಲೋರ್ ಯಾರು..? ಬೀಳೋರ್ ಯಾರು..? ಖಡಕ್ ಚಾಲೆಂಜ್ ಬೆನ್ನತ್ತಿ ಹೊರಟಿದ್ದಾರೆ ತ್ರಿಮೂರ್ತಿಗಳು..!

ರಣರಂಗಕ್ಕೆ ಒಂದಾಗಿ  ನುಗ್ಗಲಿದ್ದಾರೆ ದಳಪತಿ-ವಿಜಯೇಂದ್ರ..!
ಕಮಲದಳ ಜಂಟಿ ವ್ಯೂಹಕ್ಕೆ ಎದುರಾಗಿ ನಿಲ್ಲಲಿದ್ದಾರೆ ಬಂಡೆ..!
2024ರಲ್ಲಿ ರಣ ಭಯಂಕರ ಕಾಳಗಕ್ಕೆ ಸಾಕ್ಷಿಯಾಗಲಿದೆ ಕರ್ನಾಟಕ..!
 

Share this Video
  • FB
  • Linkdin
  • Whatsapp


2023ಕ್ಕೆ ಗುಡ್ ಬೈ ಹೇಳಿದ್ದಾಯ್ತು, 2024ಕ್ಕೆ ಕಾಲಿಟ್ಟದ್ದೂ ಆಯ್ತು. ಇದು ರಾಜ್ಯದ ಮೂರು ರಾಜಕೀಯ ಪಕ್ಷಗಳ ಮೂವರು ಅಧ್ಯಕ್ಷರ ಪಾಲಿಗೆ ಚಾಲೆಂಜಜ್‌ಗಳ ವರ್ಷ. ಒಬ್ಬೊಬ್ಬರಿಗೆ ಒಂದೊಂದು ಚಾಲೆಂಜ್, ಗುರಿ ಮಾತ್ರ ಒಂದೇ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ 2024ರ ಚಾಲೆಂಜ್ ಗೆದ್ರೆ ಮಾತ್ರ ತ್ರಿಮೂರ್ತಿಗಳ ನಾಯಕತ್ವ ಗಟ್ಟಿ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(D. K. Shivakumar), ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ(B. Y. Vijayendra
) ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ(HD Kumaraswamy). ಕಾಂಗ್ರೆಸ್‌ಗೆ(Congress) ಗೆದ್ದ ನೆಲದಲ್ಲೇ ಮತ್ತೆ ಗೆದ್ದು ಬೀಗೋ ಹಠ. ಬಿಜೆಪಿಗೆ ಸೋತ ನೆಲದಲ್ಲೇ ಗೆಲುವಿನ ಗೋಪುರ ಕಟ್ಟೋ ಛಲ. ಜೆಡಿಎಸ್'ಗೆ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಸವಾಲು. ಈ ಸವಾಲುಗಳನ್ನು ಎದುರಿಸಿ ನಿಂತಿರೋದು ಮೂರು ಪಕ್ಷಗಳ ಮೂವರು ಅಧ್ಯಕ್ಷರು. ಮೂವರ ಮುಂದೆಯೂ 2024ರಲ್ಲಿ ಸಾಲು ಸಾಲು ಸವಾಲುಗಳಿದ್ದಾವೆ. ಮೊದ್ಲಿಗೆ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ. ಒಂದು ತಿಂಗಳ ಹಿಂದಷ್ಟೇ ರಾಜ್ಯ ಬಿಜೆಪಿಯ(BJP) ಸಾರಥ್ಯ ವಹಿಸಿಕೊಂಡಿರೋ ವಿಜಯೇಂದ್ರ ಅವ್ರಿಗೆ 2024ನೇ ವರ್ಷ ತುಂಬಾನೇ ಇಂಪಾರ್ಟೆಂಟ್. ವಿಜಯೇಂದ್ರ ಅವ್ರ ರಾಜಕೀಯ ಭವಿಷ್ಯವನ್ನು ನಿರ್ಧರಿಸೋದೇ 2024. ಅಷ್ಟಕ್ಕೂ 2024 ವಿಜಯೇಂದ್ರ ಅವ್ರಿಗೆ ಯಾಕೆ ಇಂಪಾರ್ಟೆಂಟ್. ಈ ವರ್ಷ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಎದುರಾಗಲಿರೋದು ಅವ್ರ ರಾಜಕೀಯ ಜೀವನದಲ್ಲೇ ಅತೀ ದೊಡ್ಡ ಚಾಲೆಂಜ್. ಕಳೆದ ವರ್ಷ ಶಿಕಾರಿವೀರನ ಮಗ ಮೊದಲ ಬಾರಿ ವಿಧಾನಸಭಾ ಚುನಾವಣೆಗೆ ನಿಂತು ಗೆದ್ದಿದ್ದಾರೆ, ಮೊದಲ ಬಾರಿ ಶಾಸಕರಾದ ಆರೇ ತಿಂಗಳಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ವಿಜಯೇಂದ್ರ ಅವ್ರನ್ನು ಹುಡ್ಕೊಂಡ್ ಬಂದಿದೆ. ಅಷ್ಟರ ಮಟ್ಟಿಗೆ 2023ರ ವಿಜಯೇಂದ್ರ ಪಾಲಿಗೆ ಅದೃಷ್ಟದ ವರ್ಷ ಅನ್ಬಹ್ದು. ಆದ್ರೆ ಅಸಲಿ ಚಾಲೆಂಜ್ ಶುರುವಾಗೋದು ಈ ವರ್ಷ. ವಿಜಯೇಂದ್ರ ಅವ್ರಿಗಾಗಿ ಕಾದು ಕೂತಿರೋ 2024ರ ಚಾಲೆಂಜ್'ನ ಅಸಲಿ ಮುಖದ ಅನಾವರಣ ಮಾಡ್ತೀವಿ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: Dowry: ಕಲ್ಯಾಣಮಂಟಪದಲ್ಲೇ ಸರ್ಕಾರಿ ನೌಕರನ ಹೈಡ್ರಾಮಾ! ಅರಿಶಿಣ ಶಾಸ್ತ್ರದ ವೇಳೆ ವರದಕ್ಷಿಣೆಗೆ ಬೇಡಿಕೆಯಿಟ್ಟ ವರ !

Related Video