ಸಿದ್ದು-ಡಿಕೆಶಿ ಕಟ್ಟಿ ಹಾಕಲು ಕಮಲಾಧಿಪತಿಗಳ ಮೆಗಾ ಪ್ಲಾನ್! ಬಿಜೆಪಿಗೆ ಬ್ರಹ್ಮಾಸ್ತ್ರ ಸಿದ್ಧಪಡಿಸಿದ ಕಾಂಗ್ರೆಸ್!

ಕನಕಪುರ ಬಂಡೆ ವಿರುದ್ಧ ಸಾಮ್ರಾಟ, ಸಿದ್ದು ವಿರುದ್ಧ ಸೋಮಣ್ಣ..! 
ಸಿಎಂ ಬೊಮ್ಮಾಯಿ ರಣರಂಗದಲ್ಲಿ ರಣರೋಚಕ ಕುಸ್ತಿ..!
ಬಿಜೆಪಿ ಮಿಸೈಲ್‌ಗೆ ಬದಲಾಯ್ತು ವರುಣಾ ಲೆಕ್ಕಾಚಾರ..!

First Published Apr 13, 2023, 4:53 PM IST | Last Updated Apr 13, 2023, 4:53 PM IST

ಬೆಂಗಳೂರು:  ಇದು ಏಳು ಕೋಟೆ ಕಾಳಗ ರಹಸ್ಯ. ಕರ್ನಾಟಕ ಕುರುಕ್ಷೇತ್ರದಲ್ಲಿ ದೊಡ್ಡ ಸದ್ದು ಮಾಡ್ತಿರೋ ರಣಕಾಳಗದ ರೋಚಕ ರಹಸ್ಯ. ಸುಲಭ ಗೆಲುವು ಅಂದುಕೊಂಡಿದ್ದವರಿಗೆ ಒಂದೇ ಕ್ಷಣದಲ್ಲಿ ಎದುರಾಗಿದೆ ಬಿಗ್ ಶಾಕ್.

ಏಳು ರಣಕ್ಷೇತ್ರಗಳಲ್ಲಿ ಏಳು ಸೀಕ್ರೆಟ್. ಬೊಮ್ಮಾಯಿ, ಸಿದ್ದರಾಮಯ್ಯ, ಡಿಕೆಶಿ, ಅಶೋಕ್.. ಘಟಾನುಘಟಿಗಳ ಅಖಾಡಗಳಲ್ಲೇ ರಣರೋಚಕ ಚದುರಂಗದಾಟ. ಅಷ್ಟಕ್ಕೂ ಏನಿದು ಏಳು ಕೋಟೆ ಕಾಳಗ..? ಕನಕಪುರ, ವರುಣಾ, ಪದ್ಮನಾಭನಗರ, ಶಿಗ್ಗಾವಿ ರಣರಂಗಗಳ ರಣತಂತ್ರಗಳನ್ನು ನೋಡಿದ್ದಾಯ್ತು. ಏಳು ಕೋಟೆ ಕಾಳಗದಲ್ಲಿ ಇನ್ನೂ ಮೂರು ಕ್ಷೇತ್ರಗಳು ಬಾಕಿ ಇವೆ. ಇದು ಕರ್ನಾಟಕ ಕುರುಕ್ಷೇತ್ರದ ಅಖಾಡದಿಂದ ಮೇಲೆದ್ದು ನಿಂತಿರೋ ಏಳು ಕೋಟೆ ಕಾಳಗ ರಹಸ್ಯ. ಕನಕಪುರ, ವರುಣಾ, ಪದ್ಮನಾಭನಗರ, ಶಿಗ್ಗಾವಿ ರಣರಂಗಗಳ ರಹಸ್ಯ ರಣತಂತ್ರಗಳ ಮಧ್ಯೆ ರೋಚಕತೆ ಸೃಷ್ಠಿಸಿರೋದು ಅಥಣಿ ಅಖಾಡ. ಏಳು ಕೋಟೆ ಕಾಳಗದಲ್ಲಿ ಉಳಿದಿರೋದು ಹಾಸನ ಸಿಂಹಾಸನ. ಕರ್ನಾಟಕ ಕುರುಕ್ಷೇತ್ರದಲ್ಲಿ ಯುದ್ಧ ನಡೀತಾ ಇರೋದು 224 ಕ್ಷೇತ್ರಗಳಲ್ಲಿ. ಆದ್ರೆ ದೊಡ್ಡದಾಗಿ ಸದ್ದು ಮಾಡ್ತಿರೋ ಹಾಸನ ಅಖಾಡ. ಕಾರಣ ಸಿಂಹಾಸನ ಕಾಳಗ. ಆ ಕಾಳಗದ ಪರಿಣಾಮ ಹಾಸನ ರಣರಂಗದ ರಣತಂತ್ರ ತುಂಬಾನೇ ಇಂಟ್ರೆಸ್ಟಿಂಗ್, ಅಷ್ಟೇ ರೋಚಕ.