ಪಕ್ಷದ ಶೋಕಾಸ್ ನೋಟಿಸ್‌ಗೆ ಖಡಕ್ ಉತ್ತರದ ಜೊತೆಗೆ ತನಿಖೆಗೆ ಆಗ್ರಹಿಸಿದ ಯತ್ನಾಳ್

ಕೇಂದ್ರ ಬಿಜೆಪಿ ಶಿಸ್ತು ಸಮಿತಿ ನೀಡಿರುವ ನೋಟಿಸ್ ತಲುಪಿರುವ ಬಗ್ಗೆ ಸ್ವತಃ ಯತ್ನಾಳ್ ಬಾಯ್ಬಿಟ್ಟಿದ್ದಾರೆ.  ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಫೆ.18): ಸಿಎಂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಪುತ್ರ ಬಿವೈ ವಿಜಯೇಂದ್ರ ವಿರುದ್ಧ ಬುಸುಗುಟ್ಟಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಶೋಕಾಸ್ ನೋಟಿಸ್ ತಲುಪಿದೆ.

ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಬಿಗ್ ಶಾಕ್ ಕೊಟ್ಟ ಹೈಕಮಾಂಡ್

ಕೇಂದ್ರ ಬಿಜೆಪಿ ಶಿಸ್ತು ಸಮಿತಿ ನೀಡಿರುವ ನೋಟಿಸ್ ತಲುಪಿರುವ ಬಗ್ಗೆ ಸ್ವತಃ ಯತ್ನಾಳ್ ಬಾಯ್ಬಿಟ್ಟಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಯತ್ನಾಳ್, ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಮಾತನಾಡಿದ್ದಕ್ಕೆ ನನಗೆ ಶೋಕಾಸ್ ನೋಟೀಸ್ ಬಂದಿದೆ. ನೋಟೀಸ್ ಗೆ 45 ಅಂಶಗಳನ್ನು ಉಲ್ಲೇಖಿಸಿ ಪತ್ರದ ಮೂಲಕ ಉತ್ತರ ನೀಡಿದ್ದೇನೆ. ಆದರೆ ಪತ್ರದಲ್ಲಿ ಎಲ್ಲಿಯೂ ವಿಷಾದ ಅಥವಾ ಕ್ಷಮೆ ಕೇಳಿಲ್ಲ ಎಂದರು.

Related Video