ಹಿಂದೂ ಎನ್ನಲು ಯೋಗ್ಯತೆ ಬೇಕು, ಕಮಂಗಿಗಳಿಗೆ ಏನ್ರಿ ಆರ್ಥಆಗಬೇಕು? ಸಿದ್ದು ವಿರುದ್ಧ ಹೆಗಡೆ ವಾಗ್ದಾಳಿ!

ಒಳಗೊಂದು ಹೊರಗೊಂದು ಇದ್ದರೆ ಹಿಂದುತ್ವ  ಅಲ್ಲ. ಕಮಂಗಿಗಳಿಗೆ ಹಿಂದುತ್ವ ಏನ್ರಿ ಅರ್ಥ ಆಗಬೇಕು, ನಾನು ಹಿಂದು ಆದರೆ ನನಗೆ ಹಿಂದುತ್ವ ಬೇಕಿಲ್ಲ, ಇಂತವರು ಹಿಂದುತ್ವದ ಚರ್ಚೆ ಮಾಡುತ್ತಿದ್ದಾರೆ ಎಂದು ಶಾಸಕ ಅನಂತ ಕುಮಾರ್ ಹೆಗಡೆ, ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

Share this Video
  • FB
  • Linkdin
  • Whatsapp

ಮನುಷ್ಯನಿಗೆ ಅವನ ರಕ್ತವೇ ಗೊತ್ತಿಲ್ಲ. ಅಂತವರು ಹಿಂದುತ್ವ ಬಗ್ಗೆ ಮಾತನಾಡುತ್ತಾರೆ. ನಿನಗೆ ಬೇಕೋ ಬೇಡ್ವೋ, ನೀನು ಹಿಂದೂವೇ ಅಲ್ಲ ಅನ್ನೋದನ್ನು ನಾವು ತೆಗೆದು ಇಟ್ಟಾಗಿದೆ ಎಂದು ಶಾಸಕ ಅನಂತ ಕುಮಾರ್ ಹೆಗಡೆ, ಸಿದ್ದರಾಮಯ್ಯನವರು ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದಾರೆ. ಹಿಂದೂ ಏನ್ನಲು ಕೆಲವು ಯೋಗ್ಯತೆ ಇದೆ. ಆಡಂಬರದ ಬದುಕು ಒಪ್ಪಿಕೊಳ್ಳದೇ ಇರುವುದು ಹಿಂದುತ್ವ. ಈ ಹಿಂದುತ್ವದ ಬಗ್ಗೆ ಈ ಕಮಂಗಿಗಳಿಗೆ ಏನ್ರಿ ಅರ್ಥ ಆಗಬೇಕು. ಜಾತಿಯಿಂದ ಹೊರಬರಲಾಗದೇ ಇರುವವರು ಹಿಂದುತ್ವದ ಕುರಿತು ಚರ್ಚೆ ಮಾಡ್ತಾ ಇದ್ದಾರೆ. ದೇವಸ್ಥಾನಕ್ಕೆ ಹೇಗೆ ಹೋಗಬೇಕು ಅನ್ನೋದು ಗೊತ್ತಿಲ್ಲದವರು ಹಿಂದುತ್ವದ ಚರ್ಚೆ ಮಾಡುತ್ತಾರೆ. ಹಿಂದುತ್ವ ಬದುಕು ಎಂದು ಅನಂತ ಕುಮಾರ ಹೆಗಡೆ ಹೇಳಿದ್ದಾರೆ.

Related Video