Asianet Suvarna News Asianet Suvarna News

ಆರೆಸ್ಸೆಸ್ಸಗೂ ತಲೆನೋವಾದ ಪುತ್ತಿಲ ಪರಿವಾರ: ಬೇಡಿಕೆ ಕಂಡು ಬಿಜೆಪಿ ಮುಖಂಡರೇ ಹೈರಾಣು!

ಪುತ್ತಿಲ ಸಿಟ್ಟು ಶಮನಗೊಳಿಸುವಲ್ಲಿ ಬಿಜೆಪಿ ನಾಯಕರು ವಿಫಲರಾಗಿದ್ದಾರೆ. ಬಿಜೆಪಿ ಮುಖಂಡರಷ್ಟೇ ಅಲ್ಲ ಆರ್‌ಎಸ್‌ಎಸ್‌ ನಾಯಕರು ಕೂಡ ಹೈರಾಣಾಗಿದ್ದಾರೆ. 

ಮಂಗಳೂರು(ಜು.28): ಬಿಜೆಪಿ ಪಾಲಿಗೆ ಪುತ್ತಿಲ ಪರಿವಾರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೌದು, ಮಂಗಳೂರು ಬಿಜೆಪಿಗೆ ಪುತ್ತಿಲ ಪರಿವಾರ ಬಿಸಿತುಪ್ಪವಾಗಿದೆ. ಪುತ್ತಿಲ ಸಿಟ್ಟು ಶಮನಗೊಳಿಸುವಲ್ಲಿ ಬಿಜೆಪಿ ನಾಯಕರು ವಿಫಲರಾಗಿದ್ದಾರೆ. ಬಿಜೆಪಿ ಮುಖಂಡರಷ್ಟೇ ಅಲ್ಲ ಆರ್‌ಎಸ್‌ಎಸ್‌ ನಾಯಕರು ಕೂಡ ಹೈರಾಣಾಗಿದ್ದಾರೆ. ಬಿ.ಎಲ್‌. ಸಂತೋಷ್‌ ಭೇಟಿ ಬಳಿಕ ಅರುಣ್‌ ಪುತ್ತಿಲಗೆ ಜವಾಬ್ದಾರಿ ಕೊಡುವಂತ ಮಾತಾಗಿತ್ತು. ಜಿಲ್ಲಾ ಉಪಾಧ್ಯಕ್ಷನನ್ನಾಗಿ ಮಾಡುವಂತ ಬಿಜೆಪಿ ಆಫರ್‌ ಕೊಟ್ಟಿತ್ತು. ಆದರೆ, ಉಪಾಧ್ಯಕ್ಷ ಸ್ಥಾನ ಬಿಲ್‌ಕುಲ್‌ ಬೇಡ, ಕೊಡೋದಾದ್ರೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಕೊಡಿ ಅಂತ ಅರುಣ್‌ ಪುತ್ತಿಲ ಅಂತ ಕೇಳುತ್ತಿದ್ದಾರೆ. ಕಟೀಲ್‌ ಬದಲು ನನಗೆ ಲೋಕಸಭೆ ಟಿಕೆಟ್‌ ನೀಡಿ ಅಂತ ಬೇಡಿಕೆಯನ್ನೂ ಕೂಡ ಇಟ್ಟಿದ್ದಾರೆ ಅರುಣ್‌ ಪುತ್ತಿಲ. 

Video Top Stories