
ಪುತ್ರನಿಗೆ ಲೋಕಸಭೆ ಎಲೆಕ್ಷನ್ ಟಿಕೆಟ್‌ಗಾಗಿ ಈಶ್ವರಪ್ಪ ಲಾಬಿ: ಮಗನಿಗೆ ಮಠಾಧೀಶ್ವರ ಆಶೀರ್ವಾದವೂ ಇದೆ ಎಂದ ಮಾಜಿ ಸಚಿವ
ಹಾವೇರಿಯಿಂದ ಪುತ್ರ ಕಾಂತೇಶ್‌ಗೆ ಟಿಕೆಟ್ ಕೊಡಿಸಲು ಮಾಜಿ ಸಚಿವ ಈಶ್ವರಪ್ಪ ರಣತಂತ್ರ ರೂಪಿಸುತ್ತಿದ್ದಾರೆ.
ಲೋಕಸಭೆ ಎಲೆಕ್ಷನ್‌ನಲ್ಲಿ ಮಗನಿಗೆ ಬಿಜೆಪಿ ಟಿಕೆಟ್ ಕೊಡಿಸಲು ಮಾಜಿ ಸಚಿವ ಈಶ್ವರಪ್ಪ ಲಾಬಿ ನಡೆಸುತ್ತಿದ್ದಾರೆ. ಹಾವೇರಿಯಿಂದ ಪುತ್ರ ಕಾಂತೇಶ್‌ಗೆ ಟಿಕೆಟ್ ಕೊಡಿಸಲು ರಣತಂತ್ರ ರೂಪಿಸುತ್ತಿದ್ದಾರೆ. ಸಂಸದ ಶಿವಕುಮಾರ್ ಉದಾಸಿ ಸ್ಪರ್ಧೆ ಮಾಡಲ್ಲ ಎಂದಿದ್ದಾರೆ. ಈ ಹಿನ್ನೆಲೆ ಕಾಂತೇಶ್ ಸ್ಪರ್ಧೆ ಮಾಡೋದು ಸೂಕ್ತ ಅಂತ ಹಾವೇರಿಯ ಸಿಂದಗಿ ಮಠದಲ್ಲಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಹಾಗೂ, ಹಾವೇರಿಯ ಎಲ್ಲ ಮಠಾಧೀಶರ ಆಶೀರ್ವಾದವೂ ಇದೆ ಎಂದು ಈಶ್ವರಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ