ಬಿಜೆಪಿಗರಿಗೆ ದ್ವೇಷ ಹುಟ್ಟು ಹಾಕುವುದೇ ಕೆಲಸ: ಸಿದ್ದರಾಮಯ್ಯ

ಮೈಸೂರು ಮೂಲಕ ಹಾದು ಹೋಗುವ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರನ್ನು  ಒಡೆಯರ್‌ ಎಕ್ಸ್‌ಪ್ರೆಸ್‌ ಎಂದು ಮರು ನಾಮಕರಣ ಮಾಡಿದ್ದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿಯವರಿಗೆ ದ್ವೇಷ ಬಿತ್ತೋದೆ ಒಂದು ಕೆಲಸ ಎಂದು ಕಿಡಿಕಾರಿದ್ದಾರೆ. 

First Published Oct 8, 2022, 6:55 PM IST | Last Updated Oct 8, 2022, 6:55 PM IST

ಮೈಸೂರು ಮೂಲಕ ಹಾದು ಹೋಗುವ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರನ್ನು  ಒಡೆಯರ್‌ ಎಕ್ಸ್‌ಪ್ರೆಸ್‌ ಎಂದು ಮರು ನಾಮಕರಣ ಮಾಡಿ ಕೇಂದ್ರ ಸರಕಾರ ಆದೇಶಿಸಿದ್ದು, ಇದಕ್ಕೆ ಪರ ವಿರೋಧ ಚರ್ಚೆ ಆರಂಭವಾಗಿದೆ. ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಾಯಿಸುವ ಅಗತ್ಯವಿಲ್ಲ. ಟಿಪ್ಪು ಹೆಸರು ತೆಗೆದು ಬಿಟ್ಟು ಮಾಡೋ ಅಗತ್ಯ ಇರಲಿಲ್ಲ. ಒಡೆಯರ್  ಅವರಿಗೆ ಗೌರವ ಕೊಡಬೇಕು.  ಅಂತಿದ್ರೆ ಹೊಸ ರೈಲಿಗೆ ಒಡೆಯರ್‌ ಹೆಸರಿಡಬೇಕಿತ್ತು ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ. ಬಿಜೆಪಿಯವರಿಗೆ ದ್ವೇಷ ಬಿತ್ತೋದೆ ಒಂದು ಕೆಲಸ ಎಂದು ಕಿಡಿಕಾರಿದ್ದಾರೆ. 

ಇನ್ನು ಸಚಿವ ಆರ್. ಅಶೋಕ್ ಮಾತನಾಡಿ, ಟಿಪ್ಪು ಕನ್ನಡಿಗ ಅಲ್ಲ, ಅವನ ಆದೇಶ ಎಲ್ಲವೂ ಪರ್ಶಿಯನ್ ಭಾಷೆ. ಖಡ್ಗದ ಲಿಪಿಯೂ ಪರ್ಷಿಯನ್ ಭಾಷೆಯಲ್ಲಿದೆ. ಮಾತ್ರವಲ್ಲ ಟಿಪ್ಪು ಕೊಡಗಿನ ಹಿಂದೂಗಳ ಕಗ್ಗೊಲೆ ಮಾಡಿ ಮತಾಂತರ ಮಾಡಿದ್ದಾನೆ. ಮಂಡ್ಯದಲ್ಲಿ ಬ್ರಾಹ್ಮಣರ ಹತ್ಯೆ ಮಾಡಿದ್ದಾನೆ. ಇತಿಹಾಸದಲ್ಲಿ ಇದೆಲ್ಲ ಇದೆ. ಟಿಪ್ಪು ಕೊಲೆಗಟುಕ, ಒಡೆಯರು ಸಮಾಜದ ಸುಧಾರಕರು. ನಮ್ಮ ಆಯ್ಕೆ ಒಡೆಯರು. ಈ‌ ಹೆಸರು ಇಟ್ಟಿದ್ದು ಸ್ವಾಗತಾರ್ಹ ಎಂದು ಸಮರ್ಥನೆ ಮಾಡಿಕೊಂಡರು.