ಸಿದ್ದರಾಮಯ್ಯ ಬಿಜೆಪಿ ಸೇರಲು ಹೋಗಿದ್ದು ನಿಜಾನಾ? ಸ್ಫೋಟಕ ರಹಸ್ಯ ಬಹಿರಂಗ!
ಬಿಜೆಪಿ ಸೇರುವ ಪ್ರಯತ್ನ ನಡೆಸಿದ್ರಾ ಸಿದ್ದರಾಮಯ್ಯ?ಬಿಕೆ ಹರಿಪ್ರಸಾದ್ ವಿರುದ್ದ ಮುಗಿಬಿದ್ದ ಸಿದ್ದರಾಮಯ್ಯ ಬಣ, ಖರ್ಗೆ ಮುಂದೆ ಸಮಸ್ಯೆ ತೋಡಿಕೊಂಡ ಬಿಕೆ ಹರಿಪ್ರಸಾದ್, ಬಂದ್ ನಡುವೆ ಸೇವೆ ನೀಡಿದ ಚಾಲಕರ ಮೇಲೆ ಹಲ್ಲೆ ಸೇರಿದಂತೆ ಇಂದಿನ ಇಡೀ ದಿನದ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಅಧಿಕಾರಕ್ಕಾಗಿ ಯಾರು ಎಲ್‌ಕೆ ಅಡ್ವಾಣಿ ಮನೆಗೆ ತೆರಳಿ ಉಪಾಹರ ಸೇವಿಸಿ ಬಿಜೆಪಿ ಸೇರುವ ಪ್ರಯತ್ನ ನಾನು ನಡೆಸಿಲ್ಲ. ಇವತ್ತು ಅರವಿಂದ್ ಲಿಂಬಾವಳಿ ಬದುಕಿದ್ದಾರೆ, ವೆಂಕಯ್ಯ ನಾಯ್ಡು ಇದ್ದಾರೆ, ಅವರನ್ನೇ ಕೇಳಿ ಎಂದು ಕಾಂಗ್ರೆಸ್ ನಾಯಕರ ಬಿಕೆ ಹರಿಪ್ರಸಾದ್ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಬಿಕೆ ಹರಿಪ್ರಸಾದ್ ಬಾಂಬ್ ಸಿಡಿಸಿದ ಬೆನ್ನಲ್ಲೇ ಜೆಡಿಎಸ್ ಸಮಾವೇಶದಲ್ಲೂ ಸಿದ್ದರಾಮಯ್ಯನವರ ಬಿಜೆಪಿ ಸೇರುವ ಪ್ರಯತ್ನ ಮಾಹಿತಿ ಬಹಿರಂಗವಾಗಿದೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಆರೋಪ ನಿರಾಕರಿಸಿದ್ದಾರೆ.