
ಅಕ್ಟೋಬರ್ 11 ರಿಂದ ಬಿಜೆಪಿ 'ಜನಸಂಕಲ್ಪ ಯಾತ್ರೆ'
ಚುನಾವಣಾ ಪೂರ್ವ ತಯಾರಿಗೆ ಬಿಜೆಪಿ ಸಿದ್ದವಾಗಿದ್ದು,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ 'ಜನಸಂಕಲ್ಪ ಯಾತ್ರೆ' ಯನ್ನು ಹಮ್ಮಿಕೊಂಡಿದೆ.ರಾಯಚೂರಿನಿಂದ ಬಿಜೆಪಿ ಸಂಕಲ್ಪ ಯಾತ್ರೆ ಹೊರಡಲಿದೆ.
2023ರ ಚುನಾವಣೆಗೆ ರಾಜ್ಯ ಸರ್ಕಾರ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದು, ಬಿಜೆಪಿ 'ಜನಸಂಕಲ್ಪ ಯಾತ್ರೆ' ಹಮ್ಮಿಕೊಂಡಿದೆ. ಮಾಜಿ ಸಿಎಂ ಯಡಿಯೂರಪ್ಪಅವರೊಂದಿಗೆ ಸಿಎಂ ಬೊಮ್ಮಾಯಿ ಯಾತ್ರೆ ಕೈಗೊಳ್ಳಲಿದ್ದು,ರಾಯಚೂರಿನಿಂದ ಅ. 11 ರಂದು ಬಿಜೆಪಿ ಸಂಕಲ್ಪ ಯಾತ್ರೆ ಹೊರಡಲಿದೆ. ಇನ್ನು ಅ.25 ರವರೆಗೆ ಯಾತ್ರೆ ನಡೆಯಲಿದ್ದು, ಆಯ್ದ 50 ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಯಿಂದ 'ಜನಸಂಕಲ್ಪ ಯಾತ್ರೆ' ಆರಂಭವಾಗಲಿದೆ. ಹಾಗೆ 150 ಕ್ಷೇತ್ರದ ಗುರಿಯನ್ನು ಬೆಜಿಪಿ ಹೊಂದಿದ್ದು, ತಂಡಗಳನ್ನು ಮಾಡಿ ಪ್ರವಾಸಕ್ಕೆ ಮುಂದಾಗಿದೆ ಸಿಎಂ ಬೊಮ್ಮಾಯಿ ಸರ್ಕಾರ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ತಂಡ 50 ವಿಧಾನ ಸಭಾ ಕ್ಷೇತ್ರ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ 50 ಕ್ಷೇತ್ರಗಳಲ್ಲಿ ಬಿಜೆಪಿ ಪ್ರವಾಸ ಕೈಗೊಳ್ಳಲಿದೆ.