ಸಾಮಾಜಿಕ 'ಅನ್ಯಾಯ', ಅಲ್ಪಸಂಖ್ಯಾತರಿಗೆ ಮೋಸ: ಜನಸಂಕಲ್ಪ ಸಮಾವೇಶದಲ್ಲಿ ಸಿದ್ದುಗೆ ಸಿಎಂ ಗುದ್ದು!
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ಜನರ ಅಭಿವೃದ್ಧಿ ಮಾಡಿಲ್ಲ. ಅಹಿಂದ ಎಂದು ಅವರು ಬೆಳೆದರು ಎಂದೂ ಸಿಎಂ ಬೊಮ್ಮಾಯಿ ಉಡುಪಿ ಜಿಲ್ಲೆಯಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಇಂದು ನಡೆದ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದ್ದು, ಈ ವೇಳೆ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉಡುಪಿಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕೇಸರಿ ಪಡೆ ಶಕ್ತಿ ಪ್ರದರ್ಶನ ನಡೆಸಿದೆ. ಜನ ಸಂಕಲ್ಪ ಸಮಾವೇಶಕ್ಕೆ ಜನಸಾಗರ ಹರಿದುಬಂದಿದ್ದು, ಈ ವೇಳೆ ಮಾತನಾಡಿದ ಸಿಎಂ, ಮೋದಿ ಸಮರ್ಥ ಆಡಳಿತಕ್ಕೆ ಇನ್ನೂ 10 ವರ್ಷ ಬೇಕು ಎಂದಿದ್ದಾರೆ. ಮೋದಿ ಆಡಳಿತದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ಜನರ ಅಭಿವೃದ್ಧಿ ಮಾಡಿಲ್ಲ. ಅಹಿಂದ ಎಂದು ಅವರು ಬೆಳೆದರು ಎಂದೂ ಸಿಎಂ ಬೊಮ್ಮಾಯಿ ಉಡುಪಿ ಜಿಲ್ಲೆಯಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದ್ದಾರೆ.