Party Rounds: ಬಿಜೆಪಿಗೆ ಬಂಡಾಯದ ಬೇಗುದಿ, ಶೆಟ್ಟರ್‌ಗೆ ಸಿಗುತ್ತಾ ಟಿಕೆಟ್ ಹಾದಿ!
ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಆದ ಬಳಿಕ ಬಂಡಾಯ ಭುಗಿಲೆದಿದ್ದಿದೆ. ಟಿಕೆಟ್‌ಗಾಗಿ ಪಟ್ಟು ಹಿಡಿದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈಗಾಗಲೇ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿ ಆಗಿದ್ದಾರೆ.
ಬೆಂಗಳೂರು (ಏ.12): ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆಯಾದ ಬೆನ್ನಲ್ಲಿಯೇ ಕೆಲವು ಕ್ಷೇತ್ರಗಳಲ್ಲಿ ಬಂಡಾಯ ಭುಗೆಲೆದ್ದಿದೆ. ಹುಬ್ಬಳ್ಳಿ ಸೆಂಟ್ರಲ್‌ನಿಂದ ಟಿಕೆಟ್ ಕೈತಪ್ಪಿಹೋಗುವ ಸಾಧ್ಯತೆ ಇರುವ ಕಾರಣ ಮಾಜಿ ಸಿಎಂ ಜಗದೀಶ್ ಶೆಟ್ಟರ್ ದೆಹಲಿಗೆ ಪ್ರಯಾಣ ಮಾಡಿದ್ದಾರೆ.
ಶೆಟ್ಟರ್‌ಗೆ ಟಿಕೆಟ್ ನೀಡಬೇಕು ಎನ್ನುವ ಪರವಾಗಿ ಬಿಎಸ್ ಯಡಿಯೂರಪ್ಪ ಕೂಡ ಬ್ಯಾಟಿಂಗ್ ಮಾಡಿದ್ದಾರೆ. ಚುನಾವಣೆಗೆ ನಿಂತೇ ನಿಲ್ತೇನೆ ಎಂದು ಹೇಳಿದ್ದ ಶೆಟ್ಟರ್, ಬಂಡಾಯ ಅಭ್ಯರ್ಥಿ ಎನ್ನುವ ಸಂದೇಶ ಎಲ್ಲಿ ಪಾಸ್ ಆಗಿ ಬಿಡುತ್ತದೋ ಎನ್ನುವ ಎಚ್ಚರಿಕೆಯಲ್ಲಿ ಮಾತು ಬದಲಾಯಿಸಿದರು. ಹೈಕಮಾಂಡ್ ತಮ್ಮ ಮಾತನ್ನು ಒಪ್ಪುವ ವಿಶ್ವಾಸವಿದೆ ಎಂದು ಆ ಬಳಿಕ ಹೇಳಿದ್ದರು.
Party Rounds: ಲಕ್ಷ್ಮಣ್ ಸವದಿಗೆ ಟಿಕೆಟ್ ತಪ್ಪಿಸಿದ್ರಾ ಸಿಎಂ ಬೊಮ್ಮಾಯಿ?
ನವದೆಹಲಿಯಲ್ಲಿ ಪ್ರಲ್ಹಾದ್ ಜೋಶಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನೂ ಶೆಟ್ಟರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಪಕ್ಷ ನಿಶ್ಚಿತವಾಗಿ ಅವರಿಗೆ ಟಿಕೆಟ್ ನೀಡೇ ನೀಡುತ್ತದೆ ಎನ್ನುವ ವಿಶ್ವಾಸವಿದೆ ಎಂದು ಬಿಎಸ್‌ವೈ ಹೇಳಿದ್ದಾರೆ.