Asianet Suvarna News Asianet Suvarna News

ಎಂ ಬಿ ಪಾಟೀಲರ ಮಾತಿಗೆ ಬಿಜೆಪಿ ಕೆಂಡ...ಉತ್ತರ ನಾನಲ್ಲ.. ಸಮಾಜ ಕೊಡುತ್ತೆ ಅಂದಿದ್ದೇಕೆ ಚಕ್ರವರ್ತಿ..?

ಒಂದು ಕಡೆ  ನೂತನ ಕಾಂಗ್ರೆಸ್ ಸರ್ಕಾರದ ಸಚಿವ ಎಮ್ ಬಿ ಪಾಟೀಲ್.. ಮತ್ತೊಂದು ಕಡೆ ಖ್ಯಾತ ವಾಗ್ಮಿ, ಚಿಂತಕ, ಚಕ್ರವರ್ತಿ ಸೂಲಿಬೆಲೆ, ಈ ಇಬ್ಬರ ನಡುವೆ ಒಂದು ಸಂಗ್ರಾಮ ಶುರುವಾದಂತಿದೆ. 

ಒಂದು ಕಡೆ  ನೂತನ ಕಾಂಗ್ರೆಸ್ ಸರ್ಕಾರದ ಸಚಿವ ಎಮ್ ಬಿ ಪಾಟೀಲ್.. ಮತ್ತೊಂದು ಕಡೆ ಖ್ಯಾತ ವಾಗ್ಮಿ, ಚಿಂತಕ, ಚಕ್ರವರ್ತಿ ಸೂಲಿಬೆಲೆ, ಈ ಇಬ್ಬರ ನಡುವೆ ಒಂದು ಸಂಗ್ರಾಮ ಶುರುವಾದಂತಿದೆ. ರಾಜ್ಯ ರಾಜಕಾರಣದ ಮೇಲೂ ಅದರ ಪರಿಣಾಮ ಗಂಭೀರವಾಗಿ ಬೀರೋ ಸಾಧ್ಯತೆ ಇದೆ.. ಕಳೆದೆರಡು ದಿನಗಳ ಹಿಂದೆ, ಮೈಸೂರಲ್ಲಿ ವೀರ್ ಸಾವರ್ಕರ್ ಅವರ 140ನೇ ಜಯಂತಿ ಪ್ರಯುಕ್ತ, ಸಾವರ್ಕರ್ ಸಮ್ಮಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.. ಆ ಕಾರ್ಯಕ್ರಮದಲ್ಲಿ ಮಾತಾಡ್ತಾ, ಸೂಲಿಬೆಲೆ ಮಾತನಾಡುವ ಸ್ವಾತಂತ್ರ‍್ಯ ಕಿತ್ತ ಸರ್ಕಾರ ಎಂದು ಹೇಳಿದರು ಇದೇ ಮಾತುಗಳೇ ಇವತ್ತು ಎಂಬಿ ಪಾಟೀಲರು ಈ ರೀತಿ ರಿಯಾಕ್ಟ್ ಮಾಡೋದಕ್ಕೆ ಕಾರಣವಾಗಿದೆ. ಇದೇ ಮಾತೇ ಇವತ್ತು ಇಷ್ಟೆಲ್ಲಾ ಗೊಂದಲಕ್ಕೆ, ರಾಜಕೀಯ ಕೋಲಾಹಲಕ್ಕೆ ಕಾರಣವಾಗಿರೋದು.. ಸರ್ಕಾರದ ವಿರುದ್ಧ ಮಾತಾಡಿದ್ರೆ, ಜೈಲುಪಾಲಾಗಬೇಕಾಗುತ್ತೆ ಅನ್ನೋ ಅರ್ಥ ಬರೋ ಹಾಗೆ ಎಮ್ ಬಿ ಪಾಟೀಲ್ ಮಾತಾಡಿದ್ರು.. ಇದಕ್ಕೆ ಉತ್ತರ ನಾನಲ್ಲ.. ಸಮಾಜ ಕೊಡುತ್ತೆ ಅಂದಿದ್ದೇಕೆ ಚಕ್ರವರ್ತಿ..?ಚಕ್ರವರ್ತಿ ಅವರನ್ನೇ ಟಾರ್ಗೆಟ್ ಮಾಡ್ತಿರೋದೇಕೆ ಕಾಂಗ್ರೆಸ್..? ಈ ವಿಡಿಯೋ ನೋಡಿ