Asianet Suvarna News Asianet Suvarna News

ಸಿಎಂ ರೇಸ್‌ನಲ್ಲಿ ಐವರು ನಾಯಕರು: ಒಬ್ಬರಿಗೆ ಒಲಿಯುತ್ತಾ ಸಿಎಂ ಪಟ್ಟ?

ಬಿ. ಎಸ್. ಯಡಿಯೂರಪ್ಪ ಸಿಎಂ ಸ್ಥಾನ ಬಿಟ್ಟಿದ್ದಾಯ್ತು. ಹೀಗಿರುವಾಗ ಕರ್ನಾಟಕದ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಅತ್ತ ಹೈಕಮಾಂಡ್ ಕೂಡಾ ಮುಂದಿನ ಸಿಎಂ ಆಯ್ಕೆ ವಿಚಾರದಲ್ಲಿ ತಲೆ ಕೆಡಿಸಿಕೊಂಡಿದೆ. ಹೀಗಿರುವಾಗ ಬಿಜೆಪಿ ಹಿರಿಯರ ಗಮನ ಐವರು ನಾಯಕರ ಮೇಲಿದೆ ಎನ್ನಲಾಗಿದೆ.

First Published Jul 27, 2021, 9:41 AM IST | Last Updated Jul 27, 2021, 9:41 AM IST

ಬೆಂಗಳೂರು(ಜು.27) ಬಿ. ಎಸ್. ಯಡಿಯೂರಪ್ಪ ಸಿಎಂ ಸ್ಥಾನ ಬಿಟ್ಟಿದ್ದಾಯ್ತು. ಹೀಗಿರುವಾಗ ಕರ್ನಾಟಕದ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಅತ್ತ ಹೈಕಮಾಂಡ್ ಕೂಡಾ ಮುಂದಿನ ಸಿಎಂ ಆಯ್ಕೆ ವಿಚಾರದಲ್ಲಿ ತಲೆ ಕೆಡಿಸಿಕೊಂಡಿದೆ. ಹೀಗಿರುವಾಗ ಬಿಜೆಪಿ ಹಿರಿಯರ ಗಮನ ಐವರು ನಾಯಕರ ಮೇಲಿದೆ ಎನ್ನಲಾಗಿದೆ.

ಹೌದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ್, ಬಸವರಾಜ್ ಬೊಮ್ಮಾಯಿ ಹಾಗೂ ಸಿ. ಟಿ. ರವಿ ಈ ಐವರ ಮೇಲೆ ಹೈಕಮಾಂಡ್ ಕಣ್ಣಿದೆ ಎನ್ನಲಾಗಿದೆ. ಎಲ್ಲಾ ಲೆಕ್ಕಾಚಾರ ನಡೆಸಿ, ಯಾರು ಸಿಎಂ ಆದ್ರೆ ಪಕ್ಷಕ್ಕೆ ಹೆಚ್ಚು ಲಾಭ ಎಂಬುವುದನ್ನು ಗಮನದಲ್ಲಿಟ್ಟುಕೊಂಡು ಸಿಎಂ ಆಯ್ಕೆ ನಡೆಯಲಿದೆ ಎನ್ನಲಾಗಿದೆ. 

Video Top Stories