Asianet Suvarna News Asianet Suvarna News

ಪ್ರಾಮಾಣಿಕವಾಗಿ ಜನಸೇವೆ ಮಾಡಿ, ಆರ್‌ಆರ್‌ ನಗರ ಜನರ ಋಣ ತೀರಿಸುತ್ತೇನೆ: ಮುನಿರತ್ನ

ಆರ್‌ಆರ್‌ ನಗರ ಗೆಲುವನ್ನು ಮುನಿರತ್ನ ಜನತೆಗೆ ಅರ್ಪಿಸಿದ್ದಾರೆ. ' ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡಿದ್ದಾರೆ.ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತೇನೆ. ಇಂದಿನಿಂದ 20 ಗಂಟೆಗಳ ಕಾಲ ಸೇವೆ ಸಲ್ಲಿಸುತ್ತೇನೆ' ಎಂದು ಮುನಿರತ್ನ ಭರವಸೆ ನೀಡಿದ್ದಾರೆ. 

ಬೆಂಗಳೂರು (ನ. 10): ಆರ್‌ಆರ್‌ ನಗರ ಗೆಲುವನ್ನು ಮುನಿರತ್ನ ಜನತೆಗೆ ಅರ್ಪಿಸಿದ್ದಾರೆ. ' ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡಿದ್ದಾರೆ. ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತೇನೆ. ಇಂದಿನಿಂದ 20 ಗಂಟೆಗಳ ಕಾಲ ಸೇವೆ ಸಲ್ಲಿಸುತ್ತೇನೆ. ಇನ್ನೂ ಎರಡೂವರೆ ವರ್ಷಗಳ ಕಾಲ ನನ್ನ ಶಕ್ತಿಮೀರಿ ಶ್ರಮಸುತ್ತೇನೆ' ಎಂದು ಮುನಿರತ್ನ ಭರವಸೆ ನೀಡಿದ್ದಾರೆ. 

ಶಿರಾ, ಆರ್‌ಆರ್‌ ನಗರ ಗೆಲುವು ಬಿಜೆಪಿಗೆ ದೊಡ್ಡ ಶಕ್ತಿ ಬಂದಂತಾಗಿದೆ: ವಿಜಯೇಂದ್ರ

'ನಾನು ಯಾವುದೇ ಖಾತೆ ಬೇಕೆಂದು ಬೇಡಿಕೆ ಇಟ್ಟಿಲ್ಲ. ನಿರ್ಧಾರ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು. ಅವರ ತೀರ್ಮಾನವೇ ಅಂತಿಮ ತೀರ್ಮಾನ' ಎಂದು ಮುನಿರತ್ನ ಹೇಳಿದ್ದಾರೆ.

Video Top Stories