Asianet Suvarna News Asianet Suvarna News

ಕರ್ನಾಟಕ ರಾಜಕೀಯದಲ್ಲಿ 'ಜೋಡೆತ್ತು' ಹೊಯ್ತು ಜೋಡಿ ಹುಲಿ ಬಂತು...!

ಇದೀಗ ಕರ್ನಾಟಕ ರಾಜಕೀಯದಲ್ಲಿ 'ಜೋಡೆತ್ತು' ಬದಲಾಗಿ ಜೋಡಿ ಹುಲಿಗಳು ಶುರುವಾಗಿದೆ. ಕಾಂಗ್ರೆಸ್ ನಾಯಕರೊಬ್ಬರು ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೋಡೆತ್ತು ಅಲ್ಲ ಜೋಡಿ ಹುಲಿಗಳು ಎಂದು ಹೇಳಿದ್ದಾರೆ.

ಬಳ್ಳಾರಿ, (ನ.22): ಮಂಡ್ಯ ಚುನಾವಣಾ ಪ್ರಚಾರದ ವೇಳೆ ನಟ ದರ್ಶನ್ ತಮ್ಮ ಹಾಗೂ ಯಶ್ ಜೋಡಿಗೆ 'ಜೋಡೆತ್ತು' ಎಂಬ ಹೆಸರು ನೀಡಿದ್ದರು. ಬಳಿಕ ಆ ಪದ ಸಿಕ್ಕಾಪಟ್ಟೆ ಫೇಮಸ್ ಆಗಿ ಹೋಯ್ತು. ಯಾವ ಮಟ್ಟಿಗೆ ಅಂದರೆ, ಈಗ ಆ ಹೆಸರಿನಲ್ಲಿ ಸಿನಿಮಾ ಮಾಡುವ ತಯಾರಿ ಕೂಡ ನಡೆಯುತ್ತಿದೆ.

ಹೊಸ ಬಾಂಬ್ ಸಿಡಿಸಿದ ಡಿಕೆಶಿ, ಅನಿಲ್ ಲಾಡ್: ರಾಜ್ಯ ರಾಜಕಾರಣದಲ್ಲಿ ಸಂಚಲನ

ಇದೀಗ ಕರ್ನಾಟಕ ರಾಜಕೀಯದಲ್ಲಿ 'ಜೋಡೆತ್ತು' ಬದಲಾಗಿ ಜೋಡಿ ಹುಲಿಗಳು ಎನ್ನುವುದು ಶುರುವಾಗಿದೆ. ಕಾಂಗ್ರೆಸ್ ನಾಯಕರೊಬ್ಬರು ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೋಡೆತ್ತು ಅಲ್ಲ ಜೋಡಿ ಹುಲಿಗಳು ಎಂದು ಹೇಳಿದ್ದಾರೆ.