Ballari Politics: ಹೊಸ ಪಕ್ಷ ಕಟ್ಟಲು 'ಗಣಿಧಣಿ' ನಿರ್ಧಾರ?: ಆಪ್ತಮಿತ್ರರ ಮಧ್ಯೆ ಬಿರುಕು

ಕರ್ನಾಟಕ ಕುರುಕ್ಷೇತ್ರಕ್ಕೂ ಮುನ್ನ ಗಣಿನಾಡ ಆಪ್ತಮಿತ್ರರ ಮಧ್ಯೆ ಬಿರುಕು ಮೂಡಿದ್ದು, ಇದಕ್ಕೆ ಜನಾರ್ದನರೆಡ್ಡಿ ಹೊಸ ಪಕ್ಷ ಕಟ್ಟಲು ನಿರ್ಧರಿಸಿದ್ದು ಕಾರಣವಾ ಎಂಬ ಪ್ರಶ್ನೆ ಮೂಡಿದೆ.

Share this Video
  • FB
  • Linkdin
  • Whatsapp

ಗಣಿಧಣಿ ಜನಾರ್ದನರೆಡ್ಡಿ ಹೊಸ ಪಕ್ಷ ಘೋಷಣೆ ಮಾಡ್ತಾರಾ ಎಂಬ ಚರ್ಚೆ ಶುರುವಾಗಿದೆ. ಹನುಮನ ನಾಡು ಗಂಗಾವತಿಯಿಂದ ಜನಾರ್ದನ ರೆಡ್ಡಿ ಸ್ಪರ್ಧೆ ಪಕ್ಕಾ ಎನ್ನಲಾಗುತ್ತಿದೆ. ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗಿದ್ದು, ಜನಾರ್ದನ ರೆಡ್ಡಿಗೆ ತಮ್ಮವರೇ ಮುಳುವಾಗಿ ಬಿಟ್ಟರಾ ಎಂಬ ಪ್ರಶ್ನೆ ಮೂಡಿದೆ. 2013ರಲ್ಲಿ ಶ್ರೀರಾಮುಲು ಬಿಎಸ್ಆರ್ ಪಕ್ಷವನ್ನು ಕಟ್ಟಿದ್ದರು. ಈ ವಿಚಾರವಾಗಿ ಆಪ್ತಮಿತ್ರರಲ್ಲಿ ಬಿರುಕು ಮೂಡಿದ್ದು, ಈ ಕುರಿತು ಮೌನ ಮುರಿದಿದ್ದಾರೆ ಶ್ರೀರಾಮುಲು. ಇನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಜನಾರ್ದನ ರೆಡ್ಡಿ ತುದಿಗಾಲಲ್ಲಿ ನಿಂತಿದ್ದಾರೆ.

‘ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಚರ್ಚೆಗೆ ಸಿದ್ಧ’ : ವರ್ತೂರಿಗೆ ಎಂಎಲ್ಸಿ ಅನಿಲ್‌ಕುಮಾರ್‌ ಸವಾಲ್‌

Related Video