Asianet Suvarna News Asianet Suvarna News

ಸಿದ್ದರಾಮಯ್ಯ ಮಾಜಿ ಕ್ಷೇತ್ರದ ಇನ್ ಸೈಡ್ ಸ್ಟೋರಿ..ತ್ರಿಕೋನ ಕದನಕ್ಕೆ ವೇದಿಕೆಯಾಗುತ್ತಾ ಬಾದಾಮಿ ?

2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್‌  ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ಬಾದಾಮಿ  ಕ್ಷೇತ್ರದ ಗ್ರೌಂಡ್ ರಿಪೋರ್ಟ್‌ ಮಾಡಲಾಗಿದೆ.

ಐತಿಹಾಸಿಕ ಮಂದಿರಗಳು ಕೆತ್ತನೆಗಳು ಗುಹೆಗಳ ಕಾರಣದಿಂದ ಬಾದಾಮಿ ವರ್ಷವಿಡಿ ಪ್ರವಾಸಿಗರನ್ನು ಸೆಳೆಯುತ್ತದೆ , ರಾಜಕೀಯವಾಗಿಯೂ  ಬಾದಾಮಿ ಎಲ್ಲರ ಚಿತ್ತ ನೆಟ್ಟಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಚಾಮುಂಡೇಶ್ವರಿ  ಕ್ಷೇತ್ರದಿಂದ  ಬಾದಾಮಿಗೆ ಬಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯವರು ಈ ಬಾರಿ ವರುಣಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ.  ಸಿದ್ದರಾಮಯ್ಗೆ ಬಿಜೆಪಿ ಪ್ರಭಲ ನಾಯಕ ಶ್ರೀರಾಮಲು ಜಿದ್ದಾಜಿದ್ದಿನ ಸ್ಪರ್ದೆ ಕೊಟ್ಟಿದ್ದರು. ಈ ಬಾರಿ ಉಭಯ ಪಕ್ಷಗಳಿಂದ ಇಲ್ಲಿ ಯಾರಿಗೆ ಟಿಕೆಟ್‌ ಎನ್ನುವುದಕ್ಕೆ ಕದನ ಕುತೂಹಲ . ೨೦೧೮ರಲ್ಲಿ ಚಾಮುಂಡೇಶ್ವರಿಯಲ್ಲಿ ಸೂಲಿನ ಸೂಚನೆ ಸಿಕ್ಕ ಬೆನ್ನಲ್ಲೆ ಬಾದಾಮಿಯಲ್ಲಿ ನಿತ್ತಿದ್ದರು ಹೈವೋಲ್ಟೇಜ್‌ ಕ್ಷೇತ್ರವಾದ ಬಾದಾಮಿಯಲ್ಲಿ 67599 ಮತಗಳನ್ನು ಪಡೆದಿದ್ದ ಸಿದ್ದರಾಮಯ್ಯ ಬಿಜೆಪಿಯ ಶ್ರೀರಾಮಲು ವಿರುದ್ದ ಕೇವಲ 1696 ಮತಗಳ ಅಂತರದಿಂದ ಗೆದ್ದಿದ್ದರು. ಶ್ರೀರಾಮಲು 65903ಮತ ಪಡೆದು ಎರಡನೇ ಸ್ಥಾನದಲ್ಲಿದ್ದವರು ಹಾಗಾದರೆ ಈ ಬಾರಿ ಯಾರಿಗೆ ಟಿಕೆಟ್‌ ಎಂದು ಕಾದು ನೋಡಬೇಕಿದೆ