ಹುಬ್ಬಳ್ಳಿ ಅತಿರಥರ ಅಖಾಡ: ಬಿಜೆಪಿ ಭದ್ರಕೋಟೆಯಲ್ಲಿ ಕಮಾಲ್ ಮಾಡುತ್ತಾ ಕಾಂಗ್ರೆಸ್..?
2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್ ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ಹುಬ್ಬಳ್ಳಿ ಕ್ಷೇತ್ರದ ಗ್ರೌಂಡ್ ರಿಪೋರ್ಟ್ ಮಾಡಲಾಗಿದೆ.
ಗಂಡು ಮೆಟ್ಟಿದ ನಾಡು ಎಂದು ಖ್ಯಾತಿ ಪಡೆದಿರುವ ಹುಬ್ಬಳ್ಳಿಯಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಕೋಮು ಸಂಘರ್ಷದಿಂದ ಈ ಹಿಂದಿನಿಂದಲೂ ಸದ್ದು ಮಾಡಿಕೊಂಡು ಬಂದಿದ್ದ ಹುಬ್ಬಳ್ಳಿ. ಸದ್ಯ ರಾಜಕೀಯ ಲೆಕ್ಕಾಚಾರದಿಂದ ಹುಬ್ಭಳ್ಳಿ ಹೈವೋಲ್ಟೇಜ್ ಕ್ಷೇತ್ರವಾಗಿದೆ. 2018ರಲ್ಲಿ ಹುಬ್ಬಳ್ಳಿಯಲ್ಲಿ ನೇರ ಸ್ಪರ್ಧೆ ಇದ್ದಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ 75,794 ಮತಗಳನ್ನ ಪಡೆದು ಗೆದ್ದಿದ್ದರು. ಕಾಂಗ್ರೆಸ್ಸಿನ ಡಾ ಮಹೇಶ್ ನಾಲವಾಡ 54,488 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿ ಇದ್ದರೆ ಜೆಡಿಎಸ್ ನ ರಾಜಣ್ಣ ಕೊರವಿ 10,754 ವೋಟುಗಳೊಂದಿಗೆ ಮೂರನೇ ಸ್ಥಾನದಲ್ಲಿ ಇದ್ದರು. ಈ ಬಾರಿ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಸಿಗುತ್ತಾ ಇಲ್ವಾ ಎನ್ನುವ ಬಗ್ಗೆ ತುಂಬಾ ಚರ್ಚೆಗಳು ಆಗುತ್ತಿದ್ದರೆ ಅವರ ಸ್ಥಾನದ ಮೇಲೆ ಬಿಜೆಪಿಯ ಅನೇಕರು ಕಣ್ಣಿಟ್ಟು ಕಾಯ್ತಾ ಇರೋದು ಸುಳ್ಳಲ್ಲ.