ಬಿಜೆಪಿ ಮೊದಲ ಪಟ್ಟಿಯಲ್ಲಿ 9 ಶಾಸಕರು, ಒಬ್ಬ ಸಚಿವರಿಗೆ ಕೊಕ್, ಏನಿದರ ಗುಟ್ಟು?
ಕಮಲ ಪಾಳಯವು ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬಿಜೆಪಿ 9 ಹಾಲಿ ಶಾಸಕರಿಗೆ ಕೊಕ್ ನೀಡಿದೆ.
ವಿಧಾನಸಭಾ ಕ್ಷೇತ್ರಗಳಿಗೆ ಕಮಲ ಪಾಳಯವು ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಸಿಎಂ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಹಾಗೂ ಶಿಕಾರಿಪುರದಿಂದ ಬಿವೈ ವಿಜಯೇಂದ್ರಗೆ ಟಿಕೆಟ್ ಘೋಷಿಸಲಾಗಿದೆ. ಇನ್ನು 9 ಹಾಲಿ ಶಾಸಕರಿಗೆ ಕೊಕ್ ನೀಡಲಾಗಿದ್ದು ಪುತ್ತೂರು ಶಾಸಕ ಸಂಜೀವ್ ಮಠಂದೂರು, ಉಡುಪಿಯಲ್ಲಿ ರಘುಪತಿ ಭಟ್ , ಸುಳ್ಯದಲ್ಲಿ ಎಸ್ ಅಂಗಾರ, ಬೆಳಗಾವಿ ಉತ್ತರದಲ್ಲಿ ಅನಿಲ್ ಬೆನಕೆ, ರಾಯದುರ್ಗದಲ್ಲಿ ಮಹದೇವಪ್ಪ ಯದ್ವಾಡ್, ಹೊಸದುರ್ಗದಲ್ಲಿ ಗೂಳಿಹಟ್ಟಿ ಶೇಖರ್, ಕಾಪುವಿನಲ್ಲಿ ಲಾಲಾಜಿ ಮೆಂಡನ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಇನ್ನು 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ, 9 ವೈದ್ಯರಿಗೆ, ನಿವೃತ್ತ ಐಎಸ್ಎಸ್, ಐಪಿಎಸ್ ಗಳಿಗೆ ಟಿಕೆಟ್ ನೀಡಲಾಗಿದೆ. 32 ಒಬಿಸಿ ಅಭ್ಯರ್ಥಿಗಳಿಗೆ 16 ಟಿಕೆಟ್ ನೀಡಲಾಗಿದೆ.