Asianet Suvarna News Asianet Suvarna News

ನಾಮಪತ್ರ ಸಲ್ಲಿಸಿ ಕಣ್ಣೀರಿಟ್ಟ ಅರುಣಾ ಲಕ್ಷ್ಮೀ, ಸಮಾಧಾನಪಡಿಸಿದ ಪುತ್ರಿ ಬ್ರಾಹ್ಮಣಿ ರೆಡ್ಡಿ

ಬಳ್ಳಾರಿ ನಗರದಲ್ಲಿ ಕೆಆರ್‌ಪಿಪಿ ಅಭ್ಯರ್ಥಿಯಾಗಿ ಲಕ್ಷ್ಮೀ ಅರುಣಾ ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಲಕ್ಷ್ಮೀ ಅರುಣಾ ಅವರನ್ನು ಪುತ್ರಿ ಬ್ರಾಹ್ಮಣಿ ರೆಡ್ಡಿ ಸಮಾಧಾನಗೊಳಿಸಿದರು.

ಬಳ್ಳಾರಿ (ಏ.17): ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಅಭ್ಯರ್ಥಿಯಾಗಿ ಲಕ್ಷ್ಮೀ ಅರುಣಾ ನಾಮಪತ್ರ ಸಲ್ಲಿಕೆ ಮಾಡಿದರು. ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಲಕ್ಷ್ಮೀ ಅರುಣಾ ಅವರನ್ನು ಪುತ್ರಿ ಬ್ರಾಹ್ಮಣಿ ರೆಡ್ಡಿ ಸಮಾಧಾನಗೊಳಿಸಿದರು.

ನಂತರ ಮಾತನಾಡಿದ ಅವರು, ಇವತ್ತು ಜನಾರ್ದನ ರೆಡ್ಡಿಯವರ ಅನುಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿರುವೆ. ರೆಡ್ಡಿಯವರು ಬಳ್ಳಾರಿಯಲ್ಲಿ ಇಲ್ಲದಿರುವುದು ದುಃಖ ತಂದಿದೆ. ಸಾವಿರಾರು ಕಾರ್ಯಕರ್ತರು ಇಂದು ನಮ್ಮೊಂದಿಗೆ ಬಂದಿದ್ದಾರೆ. ನಾಮಪತ್ರ ಸಲ್ಲಿಕೆಗೆ ಪತಿ ಜನಾರ್ದನ ರೆಡ್ಡಿ ಬರಬೇಕು ಅನ್ನೋ ಆಸೆಯಿತ್ತು. ರೆಡ್ಡಿಯವರು 12 ವರ್ಷದಿಂದ ಬಳ್ಳಾರಿಯಿಂದ ದೂರವಿದ್ದಾರೆ. ರೆಡ್ಡಿಯವರು ಅಧಿಕಾರದಲ್ಲಿ ಇದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಅರ್ಧಕ್ಕೆ ನಿಂತಿವೆ. ಅರ್ಧಕ್ಕೆ ನಿಂತ ಅಭಿವೃದ್ಧಿ ಕಾರ್ಯ ಗಳನ್ನ ಪೂರ್ಣಗೊಳಿಸಲು ನನಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.

ಬಿಜೆಪಿ ಪ್ರತಿಸ್ಪರ್ಧಿ ಕೆಆರ್‌ಪಿಪಿ ಅಲ್ಲ. ಬಿಜೆಪಿ ಪ್ರತಿಸ್ಪರ್ಧಿ ಕಾಂಗ್ರೆಸ್ ಅನ್ನೋ ಶಾಸಕ ಸೋಮಶೇಖರರೆಡ್ಡಿ ಹೇಳಿಕೆಗೆ ಲಕ್ಷ್ಮೀ ಅರುಣಾ ತಿರುಗೇಟು ನೀಡಿದ ಅವರು, ಉತ್ತರ ಕೊಡುವ ಸಮಯ ಹತ್ತಿರದಲ್ಲಿ ಇದೆ. ಉತ್ತರ ಕೊಡ್ತೇವೆ. ನಮ್ಮ ಪಕ್ಷದಲ್ಲಿ ಎಲ್ಲ ಕಾರ್ಯಕರ್ತರು ಕೂಡ ಒಬ್ಬೊಬ್ಬ ಲೀಡರ್ ಅಗಿದ್ದಾರೆ. ಅವರಿಗೆ ಶ್ರೀಘ್ರದಲ್ಲೆ ಉತ್ತರ ಕೊಡುವ ಕಾಲ ಬರುತ್ತದೆ ಎಂದು ಹೇಳಿದರು.