Asianet Suvarna News Asianet Suvarna News

ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷಗಳಿಂದ ಸನಾತನ ಧರ್ಮ ವಿರೋಧಿ ನೀತಿ, ಸಿಡಿದೆದ್ದ ಭಾರತ!

ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷಗಳು ತಳೆದಿರುವ ಸನಾತನ ಧರ್ಮ ವಿರೋಧಿ ಹಾಗೂ ಭಾರತ ವಿರೋಧಿ ನೀತಿ  ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಉದಯ ನಿಧಿ ಸ್ಟಾಲಿನ್ ಮಾತ್ರವಲ್ಲ, ಇಂಡಿಯಾ ಒಕ್ಕೂಟದ ಇತರ ಕೆಲ ಪಕ್ಷಗಳು ಇದೇ ನೀತಿ ತಳೆದಿದೆ.

First Published Sep 5, 2023, 12:21 AM IST | Last Updated Sep 5, 2023, 12:21 AM IST

ಬೆಂಗಳೂರು(ಸೆ.04) ಡಿಎಂಕೆ ಉದಯನಿಧಿ ಸ್ಟಾಲಿನ್, ಕೇರಳ ಮುಸ್ಲಿ ಲೀಗ್ ಪಕ್ಷ, ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಪರೆನ್ಸ್ ಸೇರಿದಂತೆ ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷಗಳು ಲೋಕಸಭಾ ಚುನಾವಣೆಗೆ ಮತ್ತೆ ಸನಾತನ ಧರ್ಮ, ಹಿಂದುತ್ವ ಹಾಗೂ ಭಾರತ ವಿರೋಧಿ ನೀತಿಯನ್ನು ಬಹಿರಂಗವಾಗಿ ಘೋಷಿಸುತ್ತಿದೆ. ಈ ಮೂಲಕ ಎಡಪಂಥಿಯ, ಅಲ್ಪಸಂಖ್ಯಾತ ಸೇರಿದಂತೆ ಹಿಂದುೂ ವಿರೋಧಿ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಪ್ಲಾನ್ ಮಾಡಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಉಚಿತ ಗ್ಯಾರೆಂಟಿ ಯೋಚನೆ ಘೋಷಣೆ ಮಾಡಿ ಹಿಂದೂ ವಿರೋಧಿ ನೀತಿಯನ್ನು ಮರೆಮಾಚುವಂತೆ ಮಾಡುವ ಹುನ್ನಾರ ಅಡಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.