ಕೇಂದ್ರ ಸಚಿವ ಭಗವಂತ್‌ ಖೂಬಾಗೆ ಮತ್ತೊಂದು ಶಾಕ್!

ಲೋಕಸಭೆ ಚುನಾವಣೆಗೆ ಮರಾಠ ಮುಖಂಡ ಪದ್ಮಾಕರ್‌ ಪಾಟೀಲ್‌ಗೆ ಟಿಕೆಟ್‌ ನೀಡುವಂತೆ ಸಲಗರ ಫೇಸ್‌ಬುಕ್‌ ಲೈವ್‌ ಮೂಲಕ ಹೈಕಮಾಂಡ್‌ಗೆ ವಿನಂತಿ ಮಾಡಿದ್ದಾರೆ. 

BK Ashwin  | Published: Aug 13, 2023, 5:46 PM IST

ಕೇಂದ್ರ ಸಚಿವ ಭಗವಂತ್‌ ಖೂಬಾಗೆ ಮತ್ತೊಂದು ಶಾಕ್ ಎದುರಾಗಿದೆ. ಪ್ರಭು ಚವ್ಹಾಣ್‌ ಬಳಿಕ ಮತ್ತೊಬ್ಬ ಬೀದರ್‌ ಜಿಲ್ಲೆಯ ಶಾಸಕ ಕೇಂದ್ರ ಸಚಿವರ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಖೂಬಾ ವಿರುದ್ಧ ಬಸವಕಲ್ಯಾಣ ಶಾಸಕ ಶರಣು ಸಲಗರ ತಿರುಗಿಬಿದ್ದಿದ್ದಾರೆ. ಲೋಕಸಭೆ ಚುನಾವಣೆಗೆ ಮರಾಠ ಮುಖಂಡರಿಗೆ ಟಿಕೆಟ್‌ ನೀಡಿ, ಪದ್ಮಾಕರ್‌ ಪಾಟೀಲ್‌ಗೆ ಟಿಕೆಟ್‌ ನೀಡುವಂತೆ ಸಲಗರ ಫೇಸ್‌ಬುಕ್‌ ಲೈವ್‌ ಮೂಲಕ ಹೈಕಮಾಂಡ್‌ಗೆ ವಿನಂತಿ ಮಾಡಿದ್ದಾರೆ.