ಬಿಜೆಪಿಯಲ್ಲಿ ಕುಟುಂಬ ರಾಜಕೀಯ ಆರೋಪ: ಆನಂದ್ ಸಿಂಗ್‌ ವಿರುದ್ಧ ಸೆಡ್ಡು ಹೊಡೆದ ಸಹೋದರಿ

ಆನಂದ್ ಸಿಂಗ್ ಸಹೋದರಿ ರಾಣಿ ಸಂಯುಕ್ತ ಅವರು ಸ್ವತ: ಸಹೋದರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಿಂದ ಕುಟುಂಬ ರಾಜಕಾರಣ ಆರೋಪ ಮಾಡಿರುವ ಇವರು, ಹೊಸಪೇಟೆಯಿಂದ ಪಕ್ಷೇತರರಾಗಿ ಕಣಕ್ಕಿಳಿಯೋದಾಗಿಯೂ ಹೇಳಿದ್ದಾರೆ.

First Published Apr 13, 2023, 1:23 PM IST | Last Updated Apr 13, 2023, 1:23 PM IST

ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಹಲವೆಡೆ ಬಂಡಾಯವೂ ಹೆಚ್ಚಾಗಿದೆ. ಇದೇ ರೀತಿ, ವಿಜಯನಗರದಲ್ಲಿ ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ್‌ ಸಿಂಗ್‌ಗೆ ಬಿಜೆಪಿ ಟಿಕೆಟ್‌ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಆನಂದ್ ಸಿಂಗ್ ಸಹೋದರಿ ರಾಣಿ ಸಂಯುಕ್ತ ಅವರು ಸ್ವತ: ಸಹೋದರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಿಂದ ಕುಟುಂಬ ರಾಜಕಾರಣ ಆರೋಪ ಮಾಡಿರುವ ಇವರು, ಹೊಸಪೇಟೆಯಿಂದ ಪಕ್ಷೇತರರಾಗಿ ಕಣಕ್ಕಿಳಿಯೋದಾಗಿಯೂ ಹೇಳಿದ್ದಾರೆ. ಬ್ಲಾಕ್‌ಮೇಲ್‌ ಮಾಡಿ ಮಗನಿಗೆ ಟಿಕೆಟ್‌ ಕೊಡಿಸಿದ್ದಾರೆ ಎಂದೂ ಆನಂದ್ ಸಿಂಗ್ ಸಹೋದರಿ ರಾಣಿ ಸಂಯುಕ್ತ ಆರೋಪಿಸಿದ್ದಾರೆ.