ತಂದೆ-ಮಗನನ್ನು ಜೇನಿನ ಬಲೆಯಲ್ಲಿ ಕೆಡವಿದ ಖತರ್ನಾಕ್ ಯಾರು? ಬರೋಬ್ಬರಿ 48 ರಾಜಕಾರಣಿಗಳ ಹನಿಟ್ರ್ಯಾಪ್?
ಬಿಜೆಪಿ ಶಾಸಕ ಯತ್ನಾಳ್, ಸಚಿವ ಕೆ.ಎನ್ ರಾಜಣ್ಣ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ ಎಂದು ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ. 48 ಮಂದಿ ಹನಿಟ್ರ್ಯಾಪ್ ಆಗಿದ್ದಾರೆ ಎನ್ನಲಾಗಿದ್ದು, ಈ ಜಾಲದ ಹಿಂದಿನ ಸೂತ್ರಧಾರ ಯಾರು ಎಂಬ ಪ್ರಶ್ನೆ ಮೂಡಿದೆ.
ಕಾಂಗ್ರೆಸ್ ಸರ್ಕಾರದ ಪ್ರಭಾವಿ ಮಂತ್ರಿ ಕೆ.ಎನ್ ರಾಜಣ್ಣ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ ಅನ್ನೋ ಸ್ಫೋಟಕ ಆರೋಪ ಮಾಡಿದ್ದಾರೆ ಬಿಜೆಪಿ ಶಾಸಕ ಯತ್ನಾಳ್. ಆರೋಪ ಮಾಡಿರೋದಾದ್ರೂ ಎಲ್ಲಿ? ರಾಜಕೀಯ ಶಕ್ತಿಕೇಂದ್ರ ವಿಧಾನಸಭೆಯಲ್ಲಿ. 48 ಮಂದಿಯ ಹನಿಟ್ರ್ಯಾಪ್ ಆಗಿದೆ ಅಂತಿದ್ದಾರೆ ಸಚಿವ ರಾಜಣ್ಣ. ಹಾಗಾದ್ರೆ ಹನಿಟ್ರ್ಯಾಪ್ ಜಾಲದ ಹಿಂದಿನ ಸೂತ್ರಧಾರ ಯಾರು? ಪಾತ್ರಧಾರರು ಯಾರು? ಬೆಳಗಾವಿ ಸಾಹುಕಾರನನ್ನು ಖೆಡ್ಡಾಗೆ ಕೆಡವಿದ ಗ್ಯಾಂಗ್ ಮತ್ತೆ ಆ್ಯಕ್ಟೀವ್ ಆಗಿದ್ಯಾ?
ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ವಿರೋಧಪಕ್ಷಗಳ ಸದಸ್ಯರು ವಿಧಾನ ಪರಿಷತ್ತಿನಲ್ಲಿ ಬಾವಿಗಿಳಿದು ವಿಧೇಯಕದ ಪ್ರತಿಗಳನ್ನು ಹರಿದು, ಸೀಡಿ ಮತ್ತು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದವು.
ಮಂತ್ರಿಯೊಬ್ಬರ ತಲೆದಂಡಕ್ಕೆ ಕಾರಣವಾಗಿದ್ದ ಹನಿಟ್ರ್ಯಾಪ್ ಗ್ಯಾಂಗ್ ಮತ್ತೆ ಎದ್ದು ಬಂತಾ? 48 ಮಂದಿಯನ್ನು ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸಿದ್ದು ಅವ್ರೇನಾ..? ಹನಿಟ್ರ್ಯಾಪ್ ಗ್ಯಾಂಗ್'ನ ಅಸಲಿ ಮುಖವಾಡ ಈ ಬಾರಿಯಾದ್ರೂ ಕಳಚಿ ಬೀಳುತ್ತಾ..? ಈ ಜಾಲದ ಹಿಂದೆ ಯಾರಿದ್ದಾರೆ ಅನ್ನೋ ರಹಸ್ಯ ಹೊರಗೆ ಬರುತ್ತಾ..? ತನಿಖೆಯ ಬಗ್ಗೆ ಹೋಮ್ ಮಿನಿಸ್ಟರ್ ಹೇಳಿದ್ದೇನು..? ಇಲ್ಲಿದೆ ಸಂಪೂರ್ಣ ಸುದ್ದಿ