Asianet Suvarna News Asianet Suvarna News

ನವರಾತ್ರಿ 4 ನೇ ದಿನ, ತಾಯಿ ಕೂಷ್ಮಾಂಡೇಶ್ವರಿ ಆರಾಧನೆಯಿಂದ ಶತ್ರುಮರ್ಧನ, ಮನಸ್ಸಿಗೆ ಸಮಾಧಾನ

Oct 10, 2021, 8:38 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಅನುರಾಧಾ ನಕ್ಷತ್ರ, ಇಂದು ಭಾನುವಾರ. ಇಂದು 4 ನೇ ನವರಾತ್ರಿ. ತಾಯಿ ಕೂಷ್ಮಾಂಡು ಸ್ವರೂಪದಲ್ಲಿ ಇಂದು ಪ್ರಕಟಗೊಳ್ಳುತ್ತಾಳೆ. ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ ಬ್ರಹ್ಮ ಶಕ್ತಿಯೇ ತಾಯಿ ಕೂಷ್ಮಾಂಡೇಶ್ವರಿ. ಆಕೆಯ ಆರಾಧನೆಯಿಂದ ಶತ್ರುನಾಶ, ವಾಮಾಚಾರ ದೋಷ ನಿವಾರಣೆಯಾಗುತ್ತದೆ. ಮನಸ್ಸು ಶಾಂತವಾಗುತ್ತದೆ.