Panchang: ಇಂದು ಸೋಮ ಪ್ರದೋಷ, ಮೌನ ವ್ರತ ಆಚರಿಸಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Apr 3, 2023, 8:54 AM IST | Last Updated Apr 3, 2023, 8:54 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಸೋಮವಾರ, ತ್ರಯೋದಶಿ ತಿಥಿ, ಮಖಾ ನಕ್ಷತ್ರ.  

ಇಂದು ಸೋಮ ಪ್ರದೋಷ. ಸಾಂಬ ಸದಾಶಿವ ಆರಾಧನೆಗೆ ಬಹಳ ಉತ್ತಮ ದಿನ. ಈ ದಿನದ ಮೌನವ್ರತಕ್ಕೆ ವಿಶೇಷ ಮಹತ್ವವಿದೆ. ಸಾಂಬಸದಾಶಿವರ ಅನುಗ್ರಹವಿದ್ದರೆ ದಾಂಪತ್ಯದಲ್ಲಿ ಅನುರಾಗ ಹೆಚ್ಚುತ್ತದೆ, ಋಣಬಾಧೆ ಕರಗುತ್ತದೆ ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಪ್ರದೋಷ ವ್ರತ ಆಚರಣೆ ಹೇಗೆ, ಇದರ ಪ್ರಾಮುಖ್ಯತೆ ಏನು ತಿಳಿಯಿರಿ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

ಹನುಮ ಜಯಂತಿಯಂದೇ ಶುಕ್ರ ಗೋಚಾರ: 6 ರಾಶಿಗಳಿಗೆ ಏಪ್ರಿಲ್ ಮೊದಲ ವಾರದಿಂದಲೇ ಅದೃಷ್ಟದಾಟ ಶುರು