Panchanga: ಇಂದು ಸಪ್ತಮಿ, ಸೂರ್ಯನ ನಾಮಾವಳಿಗಳನ್ನು ಪಠಿಸಿ, ಆರೋಗ್ಯ ಭಾಗ್ಯ ಕರುಣಿಸುತ್ತಾನೆ

ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಶತಭಿಷ ನಕ್ಷತ್ರ, ಇಂದು ಶುಕ್ರವಾರ. ಶುಕ್ರವಾರ ಸಪ್ತಮಿ ಬಂದಿರುವುದು ಬಹಳ ಪ್ರಶಸ್ತವಾದ ಕಾಲ.

First Published Dec 10, 2021, 8:33 AM IST | Last Updated Dec 10, 2021, 8:33 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಶತಭಿಷ ನಕ್ಷತ್ರ, ಇಂದು ಶುಕ್ರವಾರ. ಶುಕ್ರವಾರ ಸಪ್ತಮಿ ಬಂದಿರುವುದು ಬಹಳ ಪ್ರಶಸ್ತವಾದ ಕಾಲ. ಸಪ್ತಮಿಯಂದು ಸೂರ್ಯ ಸ್ಮರಣೆ ಮಾಡಬೇಕು. ಸೂರ್ಯನ ದ್ವಾದಶ ನಾಮಾವಳಿಗಳನ್ನು ಪಠಿಸಬೇಕು. ಆತನ ಅನುಗ್ರಹ ನಮ್ಮ ಆರೋಗ್ಯಕ್ಕೂ, ಇಳೆಗೂ ಖಂಡಿತಾ ಬೇಕೇಬೇಕು.