Panchanga: ಇಂದು ಗೌರಿ-ಗಣೇಶನ ಪ್ರಾರ್ಥನೆ, ಪೂಜೆ ಮಾಡಿದರೆ ಸಕಲ ವಿಘ್ನಗಳೂ ನಿವಾರಣೆಯಾಗುವವು

 ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶುಕ್ಲ ಪಕ್ಷ, ತೃತೀಯ/ಚತುರ್ಥಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ಇಂದು ಶುಕ್ರವಾರ. 

First Published Feb 4, 2022, 8:35 AM IST | Last Updated Feb 4, 2022, 8:35 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶುಕ್ಲ ಪಕ್ಷ, ತೃತೀಯ/ಚತುರ್ಥಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ಇಂದು ಶುಕ್ರವಾರ. ತೃತೀಯ/ಚತುರ್ಥಿ ಒಟ್ಟಿಗೆ ಬಂದಿರುವುದರಿಂದ ಗೌರಿ-ಗಣೇಶನ ಪ್ರಾರ್ಥನೆಗೆ ಪ್ರಶಸ್ತವಾದ ಕಾಲ. ಅಮ್ಮನವರ ನಾಮಾವಳಿಗಳನ್ನು ಪಠಿಸುತ್ತಾ, ಹೂವುಗಳನ್ನು ಅರ್ಪಿಸಿದರೆ ಆಕೆ ಸಂತೃಪ್ತಳಾಗುತ್ತಾಳೆ. ಗಣಪತಿಗೆ ಗರಿಕೆಯನ್ನು ಸಮರ್ಪಣೆ ಮಾಡಬೇಕು. ಆಗ ಗಣಪತಿಯ ಅನುಗ್ರಹ, ಅಮ್ಮನವರ ಅನುಗ್ರಹ ನಮ್ಮದಾಗುತ್ತದೆ.