ನಿತ್ಯ ಪಂಚಾಂಗ| ಧನಿಷ್ಟ ನಕ್ಷತ್ರವಿದ್ದರೂ, ದಗ್ಧ ಯೋಗ: ಯಾರಿಗೆ ಶುಭ? ಅಶುಭ?
11 ಜೂನ್ 2020, ಗುರುವಾರದ ಭವಿಷ್ಯ| ಇಂದು ಧನಿಷ್ಟ ನಕ್ಷತ್ರವಾಗಿದೆ. ಈ ನಕ್ಷತ್ರ ಬಹಳ ಒಳ್ಳೆಯದೇ. ಶುಭ ಕಾರ್ಯ ನಡೆಸಬಹುದು. ಈ ನಕ್ಷತ್ರದಿಂದ ಮುಂದಿನ ಐದು ನಕ್ಷೆತ್ರಗಳನ್ನು ಪಂಚಕ ಎನ್ನಲಾಗುತ್ತದೆ.
11 ಜೂನ್ 2020, ಗುರುವಾರದ ಭವಿಷ್ಯ| ಇಂದು ಧನಿಷ್ಟ ನಕ್ಷತ್ರವಾಗಿದೆ. ಈ ನಕ್ಷತ್ರ ಬಹಳ ಒಳ್ಳೆಯದೇ. ಶುಭ ಕಾರ್ಯ ನಡೆಸಬಹುದು. ಈ ನಕ್ಷತ್ರದಿಂದ ಮುಂದಿನ ಐದು ನಕ್ಷೆತ್ರಗಳನ್ನು ಪಂಚಕ ಎನ್ನಲಾಗುತ್ತದೆ. ಈ ನಕ್ಷತ್ರದಲ್ಲಿ ಮೃತಪಟ್ಟವರಿಗೆ ಧನಿಷ್ಟ ಪಂಚಕ ಪ್ರಾಪ್ತವಾಗುತ್ತದೆ. ಹೀಗಾಗಿ ಈ ನಕ್ಷತ್ರದಲ್ಲಿ ಸಾವನ್ನಪ್ಪಿದ್ದರೆ ಆರು ತಿಂಗಳು ಮನೆ ಬಿಡಬೇಕೆಂದು ಧರ್ಮಶಾಸ್ತ್ರ ಹೇಳುತ್ತದೆ.
ಒಂದು ನಕ್ಷತ್ರ ಹಾಗೂ ಒಂದು ವಾರ ಇವೆರಡೂ ಸಂಯೋಗವಾದರೆ ಅಮೃತ ಸಿದ್ಧಿಯಾಗುತ್ತದೆ. ಇಲ್ಲಿ ಒಂದು ತಿಥಿ ಹಾಗೂ ವಾರ ಸಂಯೋಗವಾದರೆ ದಗ್ಧ ಯೋಗ ಎನ್ನುತ್ತಾರೆ. ಇಂದು ಗುರುವಾರ, ಷಷ್ಠಿ ತಿಥಿ. ಇವೆರಡರ ಸಂಯೋಗದಿಂದ ದಗ್ಧ ಯೋಗ ನಿರ್ಮಾಣವಾಗಿದೆ. ದಗ್ಧ ಯೋಗ ಉತ್ತಮವಲ್ಲ. ಶುಭ ಕಾರ್ಯಗಳಿಗೆ ಮಾಮೂಲಿ ಆದರೆ ಶುಭ ಕಾರ್ಯಗಳಿಗೆ ಅಷ್ಒಂದು ಉತ್ತಮ ದಿನವಲ್ಲ.
ಇನ್ನು ಇಂದು ಗುರುವಾರವಾಗಿದ್ದು, ನಿಮಗೆ ಜೀವನದಲ್ಲಿ ಬೆಳಕು ತೋರಿದ ಗುರುವಿನ ಸ್ಮರಣೆ ಮಾಡಿ ಶುಭವವಾಗಲಿದೆ.