Daily Horoscope: ಇವೆರೆಡನ್ನು ದಾನ ಮಾಡಿದರೆ ಮಹಾಲಕ್ಷ್ಮಿಯ ಸಂಪ್ರೀತಿಗೆ ಪಾತ್ರರಾಗಬಹುದು!
ಶುಕ್ರವಾರದ ದಿನ ಮಹಾಲಕ್ಷ್ಮಿಯ ಆರಾಧನೆ ಮಾಡಿದರೆ ದೇವಿಯ ಅನುಗ್ರಹ ಉಂಟಾಗುತ್ತದೆ. ಶುಕ್ರವಾರಗಳಲ್ಲಿ ದೇವಿಯನ್ನ ಪ್ರಾರ್ಥನೆ ಮಾಡಿಕೊಂಡರೆ ಶುಕ್ರ ಮೆಚ್ಚಿ ಸೌಭಾಗ್ಯ, ಸಂಪತ್ತು, ವಾಹನ, ವೈಡೂರ್ಯಗಳನ್ನು ಕೊಡುತ್ತಾನೆ.
ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ. ಶುಕ್ರವಾರದ ದಿನ ಮಹಾಲಕ್ಷ್ಮಿಯ ಆರಾಧನೆ ಮಾಡಿದರೆ ದೇವಿಯ ಅನುಗ್ರಹ ಉಂಟಾಗುತ್ತದೆ. ಶುಕ್ರನಿಗೆ ವಿಶೇಷವಾದ ಬಲವಿರುತ್ತದೆ. ಶುಕ್ರವಾರಗಳಲ್ಲಿ ದೇವಿಯನ್ನ ಪ್ರಾರ್ಥನೆ ಮಾಡಿಕೊಂಡರೆ ಶುಕ್ರ ಮೆಚ್ಚಿ ಸೌಭಾಗ್ಯ, ಸಂಪತ್ತು, ವಾಹನ, ವೈಡೂರ್ಯಗಳನ್ನು ಕೊಡುತ್ತಾನೆ. ತುಪ್ಪ ಹಾಗೂ ಮೊಸರು ದಾನ ಮಾಡುವುದರಿಂದ, ಪುಪ್ಷವನ್ನು ಸಮರ್ಪಿಸುವುದರಿಂದ ಮಹಾಲಕ್ಷ್ಮಿಯ ಸಂಪ್ರೀತಿಗೆ ಪಾತ್ರರಾಗಬಹುದು. ಇನ್ನು ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ? ಈ ಎಲ್ಲದಕ್ಕೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಉತ್ತರಿಸಿದ್ದಾರೆ.