ರಾಜ್ಯ ಕಬಡ್ಡಿಯಲ್ಲಿ ರಂಪಾಟ; BC ರಮೇಶ್ ವಿರುದ್ಧ ಮಹಿಳಾ ಕಬಡ್ಡಿ ಪಟು ಕೂಗಾಟ!

ಏನ್ಮಾಡ್ತೀಯಾ? ನಡಿ ಸ್ಟೇಶನ್‌ಗೆ, ಹಲ್ಲೆ ಮಾಡ್ತೀಯಾ? ಈ ರೀತಿ ನಾನ್ ಸ್ಟಾಪ್ ಬೈಗುಳದ ಮಾತು ಇದೀಗ ರಾಜ್ಯ ಕಬಡ್ಡಿ ಸಂಸ್ಥೆಯನ್ನೇ ತಲ್ಲಣಗೊಳಿಸಿದೆ. ರಾಜ್ಯ ಕಬಡ್ಡಿ ಸಂಸ್ಥೆ ಸಂಘಟನಾ ಕಾರ್ಯದರ್ಶಿ, ಮಾಜಿ ಕಬಡ್ಡಿ ಪಟು ಬಿಸಿ.ರಮೇಶ ವಿರುದ್ದ ಮಹಿಳಾ ಕಬಡ್ಡಿ ಪಟು ಉಷಾರಾಣಿ ಕೂಗಾಡಿದ್ದಾರೆ. ಈ ವಿಡಿಯೋ ಬಹಿರಂಗವಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜ.22): ಏನ್ಮಾಡ್ತೀಯಾ? ನಡಿ ಸ್ಟೇಶನ್‌ಗೆ, ಹಲ್ಲೆ ಮಾಡ್ತೀಯಾ? ಈ ರೀತಿ ನಾನ್ ಸ್ಟಾಪ್ ಬೈಗುಳದ ಮಾತು ಇದೀಗ ರಾಜ್ಯ ಕಬಡ್ಡಿ ಸಂಸ್ಥೆಯನ್ನೇ ತಲ್ಲಣಗೊಳಿಸಿದೆ. ರಾಜ್ಯ ಕಬಡ್ಡಿ ಸಂಸ್ಥೆ ಸಂಘಟನಾ ಕಾರ್ಯದರ್ಶಿ, ಮಾಜಿ ಕಬಡ್ಡಿ ಪಟು ಬಿಸಿ.ರಮೇಶ ವಿರುದ್ದ ಮಹಿಳಾ ಕಬಡ್ಡಿ ಪಟು ಉಷಾರಾಣಿ ಕೂಗಾಡಿದ್ದಾರೆ. ಈ ವಿಡಿಯೋ ಬಹಿರಂಗವಾಗಿದೆ.

ರಾಜ್ಯ ಕಬಡ್ಡಿ ಬೀದಿ ರಂಪಾಟ ಬಯಲಿಗೆ! ಆಟಗಾರ್ತಿ ದೂರು

ಶಿಬಿರಕ್ಕೆ ಬೇಟಿ ನೀಡಿದ ಪೊಲೀಸ್ ಅಧಿಕಾರಿಗೆ ಉಷಾರಾಣಿ ಆಟಗಾರ್ತಿಯನ್ನು ಪರಿಚಯಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಿಸಿ ರಮೇಶ್ ವಿರುದ್ಧ ಉಷರಾಣಿ ಕೂಗಾಡಿದ್ದಾರ. ಇಷ್ಟೇ ಅಲ್ಲ ಮಾತಿಗೆ ಮಾತು ಬೆಳೆದಾಗ ರಮೇಶ್ ಹಲ್ಲೆ ಮಾಡಿದ್ದಾರೆ ಎಂದು ಉಷಾರಾಣಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಿಸಿ ರಮೇಶ್ ಸೇರಿದಂತೆ ನಾಲ್ವರ ವಿಚಾರಣೆ ನಡೆಸುತ್ತಿದ್ದಾರೆ. 

ಜನವರಿ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ

Related Video