ಕಾಮನ್‌ವೆಲ್ತ್ ಗೇಮ್ಸ್‌, ಪದಕ ನಿರೀಕ್ಷೆಯಲ್ಲಿರುವ ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದ ಕೋಚ್ !

ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕಾಗಿ ಬರ್ಮಿಂಗ್‌ಹ್ಯಾಮ್ ಪ್ರಯಾಣಕ್ಕೂ ಕನ್ನಡಿಗರಿಗೆ ಕೋಚ್ ಸತ್ಯನಾರಾಯಣ ಸಿಹಿ ಸುದ್ದಿ ನೀಡಿದ್ದಾರೆ.  ಕೋಚ್ ಸತ್ಯನಾರಾಯಣ ಜೊತೆ  ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ನಡೆಸಿದ ಮಾತುಕತೆ ಇಲ್ಲಿದೆ.
 

First Published Jul 25, 2022, 8:19 PM IST | Last Updated Jul 25, 2022, 8:20 PM IST

ಬೆಂಗಳೂರು(ಜು.25): ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಜುಲೈ 28 ರಿಂದ ಆಗಸ್ಟ್ 8ರ ವರೆಗೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಬಲಿಷ್ಠ ಭಾರತ ತಂಡ ಪಾಲ್ಗೊಳ್ಳುತ್ತಿದೆ. ಬರ್ಮಿಂಗ್‌ಹ್ಯಾಮ್ ಪ್ರಯಾಣಕ್ಕೂ ಮುನ್ನ ಭಾರತ ಪ್ಯಾರಾ ಅಥ್ಲಿಟಿಕ್ಸ್ ಕೋಚ್ ಸತ್ಯನಾರಾಯಣ, ಕರ್ನಾಟಕ ಕ್ರೀಡಾಪಟುಗಳಿಂದಲೇ ಪದಕದ ನಿರೀಕ್ಷೆ ಇದೆ ಎಂದು ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕರ್ನಾಟಕ  ನಿರಂಜನ್ ಪ್ರಸಾದ್ ಸೇರಿದಂತೆ ಇಬ್ಬರು ಕ್ರೀಡಾಪಟುಗಳಿಂದ ಪದಕದ ನಿರೀಕ್ಷೆ ಇಡಲಾಗಿದೆ.  ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಕ್ರೀಡಾಪಟುಗಳಿಗೆ ಶುಭಹಾರೈಸಿದ್ದಾರೆ. ಜೊತೆಗೆ ಅಭ್ಯಾಸಕ್ಕೆ ಉತ್ತಮ ಸಹಕಾರ ನೀಡಿದ್ದಾರೆ. ಹೀಗಾಗಿ ಈ ಬಾರಿ ಹೆಚ್ಚಿನ ಪದಗಳು ಬರಲಿವೆ ಎಂದಿದ್ದಾರೆ. ಕೋಚ್ ಸತ್ಯನಾರಾಯಣ ಜೊತೆ  ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ನಡೆಸಿದ ಮಾತುಕತೆ ಇಲ್ಲಿದೆ.