Asianet Suvarna News Asianet Suvarna News

Video: ಮಹಿಳಾಧಿಕಾರಿಯನ್ನೇ ದೊಣ್ಣೆಯಿಂದ ಹೊಡೆದ MLA ಚೇಲಾಗಳು

Jun 30, 2019, 4:34 PM IST

ಹೈದರಾಬಾದ್​, [ಜೂ.30]: ಕೋಮಾರಂ ಭೀಮ್​ ಅಸೀಫಾಬಾದ್​ ಜಿಲ್ಲೆಯ ಸಿರ್​ಪುರ ಕಾಗಜ್​ನಗರ್​ ಬ್ಲಾಕ್​ನಲ್ಲಿ ಸಸಿ ನೆಡಲು ಹೋಗಿದ್ದ ಅರಣ್ಯಾಧಿಕಾರಿಗಳು, ಪೊಲೀಸರ ಮೇಲೆ ತೆಲಂಗಾಣದ ಆಡಳಿತ ಪಕ್ಷ ಟಿಆರ್​ಎಸ್​ ಕಾರ್ಯಕರ್ತಕರು ದೊಣ್ಣೆಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮಹಿಳಾ ಅರಣ್ಯಾಧಿಕಾರಿ ಎಂಬುದನ್ನೂ ಲೆಕ್ಕಿಸದೇ ರಾಜಕೀಯ ನಾಯಕರು ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.