Asianet Suvarna News Asianet Suvarna News

ಅಯೋಧ್ಯೆ: ಮರುಪರೀಶಿಲನೆ ಅರ್ಜಿ ಸಲ್ಲಿಸಿದವರಿಗೆ ಮುಖಭಂಗ, ಎಲ್ಲ ಅರ್ಜಿ ವಜಾ

Dec 12, 2019, 11:01 PM IST

ನವದೆಹಲಿ(ಡಿ. 12) ಅಯೋಧ್ಯೆ ಬಾಬರಿ ಮಸೀದಿ ಜಾಗ ವಿವಾದದಲ್ಲಿ ಸುಪ್ರೀಂ ಕೋರ್ಟ್​ನ ಸಂವಿಧಾನಿಕ ಪೀಠ ಇತ್ತೀಚೆಗೆ ನೀಡಿದ ತೀರ್ಪನ್ನು ಮರುಪರಿಶೀಲಿಸಬೇಕೆಂದು ಸಲ್ಲಿಸಲಾಗಿದ್ದ ಎಲ್ಲಾ 18  ಅರ್ಜಿಗಳನ್ನು ಸರ್ವೊಚ್ಚ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.

ಇಲ್ಲಿಗೆ ಒಂದು ಹಂತ ಮಾತ್ರ ಸ್ಪಷ್ಟವಾಗಿದ್ದು ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯಲ್ಲಿ ಯಾವುದೇ ಆಧಾರಗಳಿಲ್ಲ ಎಂದು ನ್ಯಾಯಾಲಯ ಮತ್ತೊಮ್ಮೆ ಸ್ಪಷ್ಟಪಡಿಸಿದೆ.