Asianet Suvarna News Asianet Suvarna News

Gyanvapi ಆವರಣದಲ್ಲಿ ಪೂಜೆಗೆ ಅನುಮತಿ ಕೋರಿದ್ದ ಅರ್ಜಿ ಮಾನ್ಯವಷ್ಟೇ, ಬೇರೆನೂ ಇಲ್ಲ; ರಜಾಕ್‌

Gyanvapi Masjid Verdict: ಗ್ಯಾನವಾಪಿ ಮಸೀದಿ ತೀರ್ಪಿನ ಕುರಿತಾಗಿ ಪ್ರತಿಕ್ರಿಯಿಸಿರುವ ಚಿಂತಕ ಅಬ್ದುಲ್‌ ರಜಾಕ್‌ ಕೋರ್ಟ್‌ ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಒಪ್ಪಿದೆ ಅಷ್ಟೆ ಎಂದಿದ್ದಾರೆ.

ಗ್ಯಾನವಾಪಿ ಮಸೀದಿಯ ಹೊರ ಆವರಣದಲ್ಲಿರುವ ಗೋಡೆಗಳ ಮೇಲಿನ ಹಿಂದೂ ದೇವತೆಗಳನ್ನು ಪೂಜೆ ಮಾಡಲು ದೆಹಲಿ ಮೂಲದ ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಗೆ ದೊಡ್ಡ ಗೆಲುವು ಸಿಕ್ಕಂತಾಗಿದೆ. ವಾರಣಾಸಿ ಜಿಲ್ಲಾ ಕೋರ್ಟ್‌ ಸೋಮವಾರ ನೀಡಿದ ಮಹತ್ವದ ತೀರ್ಪಿನಲ್ಲಿ ಹಿಂದುಗಳು ಸಲ್ಲಿರುವ ಅರ್ಜಿ ವಿಚಾರಣೆಗೆ ಅರ್ಹ ಎನ್ನುವ ಮಹತ್ವದ ತೀರ್ಪು ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅಬ್ದುಲ್‌ ರಜಾಕ್‌, ವಿಚಾರಣೆಗೆ ಅರ್ಜಿ ಅರ್ಹ ಎಂಬುದಷ್ಟೇ ನ್ಯಾಯಾಲಯ ಸದ್ಯ ಹೇಳಿರುವುದು. ಈ ಹಿಂದೆಯೂ ವರ್ಷಕ್ಕೊಮ್ಮೆ ಪೂಜೆ ಮಾಡಲು ಮಹಿಳೆಯರಿಗೆ ಅವಕಾಶವಿತ್ತು. ಇನ್ಮುಂದೆ ಪ್ರತಿನಿತ್ಯ ಪೂಜೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆಯನ್ನು ಕೋರ್ಟ್‌ ನಡೆಸಲಿದೆ. ಅದಾದ ನಂತರ ತೀರ್ಪು ಬರಲಿದೆ ಎಂದಿದ್ದಾರೆ. 

Video Top Stories