ವಿಶ್ವನಾಥ್ ಮತ್ತೊಂದು ಕೃತಿ ಬಿಡುಗಡೆಗೆ ರೆಡಿ, ಹಚ್ಚಿದೆ ವಿವಾದದ ಕಿಡಿ!

ಸದನದಲ್ಲಿ ಕುಡುಕರಿದ್ದಾರೆ ಎಚ್ಚರ! | ಸದನದ ಶಾಕಿಂಗ್ ಸಂಗತಿಯನ್ನು ಬಿಚ್ಚಿಟ್ಟಿದೆ ‘ಹಳ್ಳಿ ಹಕ್ಕಿ’ | ವಿವಾದ ಸೃಷ್ಟಿಸಿದೆ ಎಚ್. ವಿಶ್ವನಾಥ್ ಹೊಸ ಕೃತಿ | ‘ಎಣ್ಣೆ ಮೂಡ್’ನಲ್ಲಿರುವ ಶಾಸಕರು ಯಾರ್ಯಾರು?  ಪುಸ್ತಕದ ಬಗ್ಗೆ ವಿಶ್ವನಾಥ್ ಹೇಳೋದೇನು? ಇಲ್ಲಿದೆ ಡೀಟೆಲ್ಸ್...

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 19): ‘ಹಳ್ಳಿ ಹಕ್ಕಿ’ಯಾಗಿ ಹಾಡಿದ್ದ, ಕಾಡಿದ್ದ, ಕುಕ್ಕಿದ್ದ ನಾಡಿನ ಹಿರಿಯ ರಾಜಕಾರಣಿ ಎಚ್. ವಿಶ್ವನಾಥ್, ಈಗ ತಮ್ಮ ಇನ್ನೊಂದು ಪುಸ್ತಕದ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಶ್ವನಾಥ್ ರಚಿಸಿರುವ ಹೊಸ ಕೃತಿ ‘ಸದನದಲ್ಲಿ ಕುಡುಕರು’, ಜನಪ್ರತಿನಿಧಿಗಳ ಕುರಿತು ನಾಡಿನ ಜನರ ಕುತೂಹಲವನ್ನು ಹೆಚ್ಚಿಸಿದರೆ, ರಾಜಕಾರಣಿಗಳ ನಿದ್ದೆಗೆಡಿಸಿದೆ. ಪ್ರಜಾತಂತ್ರದ ದೇವಾಲಯ ಎಂದೇ ಕರೆಯಲ್ಪಡುವ ಸದನಕ್ಕೆ ’ಎಣ್ಣೆ ಮೂಡ್’ನಲ್ಲಿ ಬರುವ ಜನಪ್ರತಿನಿಧಿಗಳ ಬಗ್ಗೆ ಈ ಪುಸ್ತಕ ಆಘಾತಕಾರಿ ಸಂಗತಿಗಳನ್ನು ದಾಖಲಿಸಿದೆ ಎಂದೆನ್ನಲಾಗುತ್ತಿದೆ.

ಇತ್ತೀಚೆಗೆ ರಾಜಕೀಯ- ರಾಜೀನಾಮೆಯಿಂದಾಗಿ ಸುದ್ದಿಯಲ್ಲಿರುವ ವಿಶ್ವನಾಥ್ ‘ವಿವಾದಾತ್ಮಕ’ ಕೃತಿಯ ಬಗ್ಗೆ ಸುವರ್ಣನ್ಯೂಸ್ ಪ್ರತಿನಿಧಿ ಸುರೇಶ್ ಜೊತೆ ಮಾತನಾಡಿದ್ದಾರೆ. ಯಾರ್ಯಾರು ಕುಡಿದು ಬರುತ್ತಿದ್ದರು ಎಂಬ ಬಗ್ಗೆ ಸುಳಿವು ನೀಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ.... 

Related Video