ತೆಪ್ಪಕಾಡು ಆನೆ ಶಿಬಿರಕ್ಕೆ 'ನಮೋ' ಭೇಟಿ, ಬೊಮ್ಮ-ಬೆಳ್ಳಿ ದಂಪತಿಗೆ ಸನ್ಮಾನ

ಪ್ರಧಾನಿ ನರೇಂದ್ರ ಮೋದಿ  ಬಂಡೀಪುರದಲ್ಲಿ ಸಫಾರಿ ನಡೆಸಿದ  ಬಳಿಕ ಮದುಮಲೈನಲ್ಲಿ ಭಾರತಕ್ಕೆ ಆಸ್ಕರ್  ತಂದುಕೊಟ್ಟ "ಎಲಿಫೆಂಟ್ ವಿಸ್ಪರರ್ಸ್" ನಲ್ಲಿ ಅಭಿನಯಿಸಿದ ಬೊಮ್ಮನ್ ಹಾಗೂ ಬೆಳ್ಳಿ ದಂಪತಿಯನ್ನು ಭೇಟಿ ಮಾಡಿದ್ದಾರೆ.

First Published Apr 9, 2023, 1:06 PM IST | Last Updated Apr 9, 2023, 1:27 PM IST

ಪ್ರಧಾನಿ ನರೇಂದ್ರ ಮೋದಿ  ಬಂಡೀಪುರದಲ್ಲಿ ಸಫಾರಿ ನಡೆಸಿದ  ಬಳಿಕ ಮದುಮಲೈನಲ್ಲಿ ಭಾರತಕ್ಕೆ ಆಸ್ಕರ್  ತಂದುಕೊಟ್ಟ "ಎಲಿಫೆಂಟ್ ವಿಸ್ಪರರ್ಸ್" ನಲ್ಲಿ ಅಭನಯಿಸಿದ ಬೊಮ್ಮನ್ ಹಾಗೂ ಬೆಳ್ಳಿ ದಂಪತಿಯನ್ನು ಭೇಟಿ ಮಾಡಿದ್ದಾರೆ. ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ತೆಪ್ಪಕಾಡು ಆನೆ ಶಿಬಿರದಲ್ಲಿ ಬೊಮ್ಮ ದಂಪತಿಯನ್ನು ಪ್ರಧಾನಿ ಭೇಟಿ ಮಾಡಿ, ಆಸ್ಕರ್ ಪ್ರಶಸ್ತಿ ಬಂದಿರುವುದಕ್ಕೆ ಅಭಿನಂದನೆಯನ್ನೂ ತಿಳಿಸಿದ್ದಾರೆ. ಇನ್ನು  ಆನೆ ಶಿಬಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗಜಪಡೆಗೆ ಕಬ್ಬು ತಿನ್ನಿಸಿ ಗಮನ ಸೆಳೆದಿದ್ದಾರೆ.ಬಂಡೀಪುರ ಗಡಿ ಭಾಗದಿಂದ ಮುದುಮಲೈ ಆನೆ ಶಿಬಿರಕ್ಕೆ 6 ಕಿಲೋ ಮೀಟರ್‌ ಇದ್ದು, ನರೇಂದ್ರ ಮೋದಿಯವರು ಬಂಡೀಪುರದಲ್ಲಿ ಸವಾರಿ ಮುಗಿಸಿ ಬೊಮ್ಮನ್ ಹಾಗೂ ಬೆಳ್ಳಿಯನ್ನು  ಭೇಟಿ ಮಾಡಿದ್ದಾರೆ

Video Top Stories