Asianet Suvarna News Asianet Suvarna News

ಅಮೆಜಾನ್‌ನಲ್ಲಿ ಭಯಂಕರ ಕಾಡ್ಗಿಚ್ಚು: ಉಪಗ್ರಹದ ಕಣ್ಣಿಗೂ ಹೊಗೆ ಕಾಣಿಸ್ತು!

ಕೆಲವಾರಗಳ ಹಿಂದೆ ಶುರುವಾಗಿರುವ ಕಾಡ್ಗಿಚ್ಚು, ಅಮೆಜಾನ್ ಮಳೆಕಾಡುಗಳನ್ನು ಸುಟ್ಟು ಬೂದಿ ಮಾಡುತ್ತಿದೆ. ಬೆಂಕಿಯ ತೀವ್ರತೆ ಎಷ್ಟಿದೆ ಅಂದ್ರೆ, ಬಾಹ್ಯಾಕಾಶದಿಂದಲೂ ದಟ್ಟ ಹೊಗೆ ಕಾಣಿಸುತ್ತಿದೆ. ಅಮೆಜಾನಾಸ್, ರೊಡೋನಿಯಾ, ಪಾರಾ ಮತ್ತು ಮ್ಯಾಟೊ ಗ್ರೋಸೋ ಈ ಬ್ರೆಝಿಲಿಯನ್ ರಾಜ್ಯಗಳಲ್ಲಿ ಹರಡಿರುವ ಬೆಂಕಿಯ ಉಪಗ್ರಹ ಚಿತ್ರಗಳನ್ನು ನಾಸಾ ಪ್ರಕಟಿಸಿದೆ. ವಿಶ್ವದ ಅತೀ ದೊಡ್ಡ ಮಳೆಕಾಡಾಗಿರುವ ಅಮೆಜಾನ್, ಗ್ಲೋಬಲ್ ವಾರ್ಮಿಂಗನ್ನು ನಿಯಂತ್ರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಸುಮಾರು ಮೂರು ಕೋಟಿ ಸಸ್ಯ-ಪ್ರಾಣಿ ಪ್ರಬೇಧಗಳನ್ನು ತನ್ನ ಒಡಳೊಳಗೆ ಬಚ್ಚಿಟ್ಟುಕೊಂಡಿರುವ ಅಮೆಜಾನ್ ಅರಣ್ಯ, ಒಂದು ಮಿಲಿಯನ್ ಬುಡಕಟ್ಟು ಜನರಿಗೆ ಆಶ್ರಯ ನೀಡಿದೆ.

Video Top Stories