Asianet Suvarna News Asianet Suvarna News

ಮೈತ್ರಿಗೆ ಮತ್ತೊಂದು ಶಾಕ್! ಸದ್ದಿಲ್ಲದೇ ಮುಂಬೈ ಸೇರಿದ ಮತ್ತೊಬ್ಬ ಶಾಸಕ!

Jul 8, 2019, 5:40 PM IST

ಬೆಂಗಳೂರು (ಜು.08): ಸರ್ಕಾರಕ್ಕೆ ಏನೂ ಆಗಲ್ಲ ಎಂದು ಹೇಳುತ್ತಿರುವ ಮೈತ್ರಿ ನಾಯಕರಿಗೆ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಬೆಳಗ್ಗೆ ಎಚ್.ನಾಗೇಶ್ ಸಖ್ಯ ತೊರೆದು ಮುಂಬೈಗೆ ಹೊರಟಿರುವ ಬೆನ್ನಲ್ಲೇ, ಮತ್ತೊಬ್ಬ ಶಾಸಕ ಬಂಡಾಯವೆದ್ದಿದ್ದು ಸದ್ದಿಲ್ಲದೇ ಮುಂಬೈಗೆ ಹೊರಟಿದ್ದಾರೆ.

ಸುವರ್ಣನ್ಯೂಸ್‌ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಪಕ್ಷೇತರ ಶಾಸಕ, ಸಚಿವ ಆರ್.ಶಂಕರ್ ಕೂಡಾ ಮೈತ್ರಿಗೆ ಬೈ-ಬೈ ಹೇಳಿ ಮುಂಬೈಯತ್ತ ಮುಖ ಮಾಡಿದ್ದಾರೆ. ರಾಣೆಬೆನ್ನೂರು ಶಾಸಕ ಆರ್. ಶಂಕರ್ ಕಳೆದ ತಿಂಗಳು ನಡೆದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಎರಡನೇ ಬಾರಿ ಸಚಿವರಾಗಿ ಎಚ್.ಡಿ. ಕುಮಾರಸ್ವಾಮಿ ಸಂಪುಟ ಸೇರಿದ್ದರು.